ಚಳಿಗಾಲದಲ್ಲಿ ನಿಮ್ಮ ಲುಕ್ ಹೆಚ್ಚಿಸುವ ಡಿಸೈನರ್ ಶಾಲುಗಳು…….!

ಚಳಿಗಾಲಕ್ಕೆ ಹೊಂದಿಕೆಯಾಗುವ ಡಿಸೈನರ್ ಮತ್ತು ಫ್ಯಾಶನ್ ಶಾಲುಗಳು ಮಾರುಕಟ್ಟೆಗೆ ಬಂದಾಗಿದೆ. ನಿಮಗಿಷ್ಟದ ವಸ್ತುಗಳನ್ನು ಈ ಚಳಿಗಾಲದಲ್ಲಿ ಖರೀದಿಸಿದ್ದೀರಾ…?

ಶಾಲುಗಳು ಫ್ಯಾಶನ್ ಲೋಕದಲ್ಲಿ ಮಹತ್ತರವಾದ ಸ್ಥಾನವನ್ನೇ ಪಡೆದಿವೆ. ಇವುಗಳು ಫ್ಯಾಶನ್ ಸಿಂಬಲ್ ಎಂದೇ ಗುರುತಿಸಿಕೊಂಡಿವೆ. ಇಂದಿನ ಯುವ ಜನತೆ ಯಾವ ವಿನ್ಯಾಸದ ಉಡುಪು ಧರಿಸಿದರೂ ಅದಕ್ಕೊಪ್ಪುವ ಶಾಲುಗಳನ್ನು ವಿಭಿನ್ನ ಶೈಲಿಯಲ್ಲಿ ಧರಿಸಿಕೊಂಡು ಮನಸೆಳೆಯುತ್ತಾರೆ.

ಇಂದು ಮಾರುಕಟ್ಟೆಯಲ್ಲಿ ಲಭ್ಯವಿರುವ ಡಿಸೈನರ್ ಶಾಲುಗಳು ಕಾಟನ್, ಹ್ಯಾಂಡ್ ಲೂಮ್, ಡಿಸೈನರ್ ಇಲ್ಲವೇ ರೇಶ್ಮೆ ಸ್ವರೂಪದಲ್ಲಿ ಲಭ್ಯವಿದೆ. ಇದು ಚಳಿಗಾಲದಲ್ಲಿ ನಿಮ್ಮ ಮೈಯನ್ನು ಬೆಚ್ಚಗಿಡುತ್ತವೆ. ಕಾಲೇಜು ವಿದ್ಯಾರ್ಥಿಗಳಿಗೂ ಇದು ಬಲುಪ್ರಿಯವಾಗಿದೆ.

ಚಳಿಗಾಲದಲ್ಲಿ ಹೆಚ್ಚಾಗಿ ಮಫ್ಲರ್, ಟೋಪಿ ಸಾಕ್ಸ್ ಧರಿಸಿಕೊಂಡು ಓಡಾಡುತ್ತಾರೆ. ಈಗ ಅವುಗಳ ಸಾಲಿಗೆ ಡಿಸೈನರ್ ಶಾಲುಗಳು ಸೇರ್ಪಡೆಯಾಗಿವೆ. ಸೂಟುಗಳು ಮೇಲೆಯೂ ಜನ ಶಾಲು ಹೊದೆಯುತ್ತಿರುವುದು ಇದರ ಜನಪ್ರಿಯತೆಗೆ ಸಾಕ್ಷಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read