ಮಗನಿಗೆ ಅಮ್ಮ ನೀಡಿದ ಪಕೋಡಾ ವಿಡಿಯೋ ವೈರಲ್​: ಇದರಲ್ಲೇನು ವಿಶೇಷ ಅಂತೀರಾ ?

ದೇಸಿ ಮಹಿಳೆಯೊಬ್ಬರು ತನ್ನ ಮಗ ಡಯಟ್‌ನಲ್ಲಿರುವಾಗ ಮನೆಯಲ್ಲಿ ತಯಾರಿಸಿದ ಕೆಲವು ಪಕೋಡಾಗಳನ್ನು ತಿನ್ನುವಂತೆ ಮನವೊಲಿಸಲು ಸಾಕಷ್ಟು ಅದ್ಭುತವಾದ ಮಾರ್ಗವನ್ನು ಹೊಂದಿರುವ ವಿಡಿಯೋ ವೈರಲ್​ ಆಗಿದೆ.

ಈಗ ವೈರಲ್ ಆಗಿರುವ ವಿಡಿಯೋವನ್ನು ನೀನಾ ಕಪೂರ್ ಎಂಬ ಬಳಕೆದಾರರು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಕ್ಲಿಪ್‌ನಲ್ಲಿ, ನೀನಾ ತನ್ನ ಕುಟುಂಬಕ್ಕಾಗಿ ರುಚಿಕರವಾದ ಪಕೋಡಾಗಳನ್ನು ತಯಾರಿಸುವುದನ್ನು ಕಾಣಬಹುದು.

ಅವರ ಮಗ “ಮಮ್ಮಿ, ನಾನು ನಿಮಗೆ ಹೇಳಿದ್ದೇನೆ, ನಾನು ವ್ಯಾಯಾಮ ಮಾಡಲು ಹೋಗುತ್ತಿದ್ದೇನೆ. ಈಗ ನನಗೆ ಒಳ್ಳೊಳ್ಳೆ ಆಹಾರಗಳನ್ನು ಮಾಡಿಕೊಡಿ” ಎಂದು ಹೇಳುತ್ತಾನೆ.

ಅದಕ್ಕೆ ತಾಯಿ ತ್ವರಿತವಾಗಿ ಉತ್ತರಿಸಿ, ನಾನು ಯಾವಾಗಲೂ ಒಳ್ಳೊಳ್ಳೆ ಆಹಾರ ಮಾಡುತ್ತೇನೆ. ಈಗಲೇ ತಿನ್ನು. ವಯಸ್ಸಾದ ಮೇಲೆ ತಿನ್ನಲು ಆಗುವುದಿಲ್ಲ ಎನ್ನುತ್ತಾರೆ.

ಆಗ ಮಗ ಸರಿ ಹಾಗಿದ್ದರೆ ಕೊಡು. ಆದರೆ ಮಯೋನಿಸ್​ ಜೊತೆಯಷ್ಟೇ ಪಕೋಡಾ ತಿನ್ನುತ್ತೇನೆ ಎನ್ನುತ್ತಾನೆ. ಅದಕ್ಕೆ ತಾಯಿ ಪುದೀನಾ ಚಟ್ನಿ ಮಾಡಿದ್ದೇನೆ. ಅದರ ಜೊತೆ ತಿನ್ನು. ಎಲ್ಲದಕ್ಕೂ ಮಿಯೋನೀಸ್​ ಕೇಳುತ್ತಿಯಲ್ಲ, ಅದೇನು ನಿನ್ನ ಗರ್ಲ್​ಫ್ರೆಂಡಾ ಎಂದು ಕೇಳುತ್ತಾರೆ. ಮಗ ಸುಮ್ಮನೆ ಅದನ್ನು ತೆಗೆದುಕೊಂಡು ಹೋಗುತ್ತಾನೆ.

ಈ ವಿಡಿಯೋ ವೈರಲ್​ ಆಗಿದ್ದು, ಜನರು ವಿಭಿನ್ನ ರೀತಿಯಲ್ಲಿ ತಮಾಷೆಯಾಗಿ ಪ್ರತಿಕ್ರಿಯೆ ನೀಡುತ್ತಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read