ಜಪಾನಿನ ಬ್ರಾಂಡ್​ ಮಾರಾಟ ಮಾಡುವ ದೇಸಿ ವ್ಯಕ್ತಿಗೆ ನೆಟ್ಟಿಗರು ಫಿದಾ

ಜನರು ತಮ್ಮ ದೇಸಿ ಸಂಸ್ಕೃತಿಯನ್ನು ಸಾಕಷ್ಟು ಹೆಮ್ಮೆಯಿಂದ ಬಿಂಬಿಸುವ ಹಲವಾರು ವೀಡಿಯೊಗಳು ಅಂತರ್ಜಾಲದಲ್ಲಿವೆ. ಅಂಥದ್ದೇ ಒಂದು ದೇಸಿ ಮನುಷ್ಯನ ವೀಡಿಯೊ ವೈರಲ್​ ಆಗಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಪುರುಷನೊಬ್ಬ ಮಹಿಳೆಯೊಂದಿಗೆ ಶಾಪಿಂಗ್ ಮಾಡುತ್ತಿರುವುದನ್ನು ನೋಡಬಹುದು. ಈತ ಕ್ಲೋಯ್​ ಎಂದು ಬರೆಯಲಾದ ವಸ್ತುವನ್ನು ಮಾರಾಟ ಮಾಡುತ್ತಿದ್ದಾನೆ. ಬಾಕ್ಸ್​ ಮೇಲೆ ಕ್ಲೋಯ್​ ಎಂದು ಬರೆಯಲಾಗಿದೆ. ಅಸಲಿಗೆ, ಕ್ಲೋಯ್ ಎಂದರೆ ಇದು ಜಪಾನಿನ ಜನಪ್ರಿಯ ಫ್ಯಾಷನ್ ಬ್ರ್ಯಾಂಡ್. ಕೈಚೀಲಗಳು, ಪರಿಕರಗಳು ಮತ್ತು ಪಾದರಕ್ಷೆಗಳನ್ನು ಒಳಗೊಂಡಿರುವ ಬ್ರಾಂಡ್​ ಇದು.

ಆದರೆ ಈ ದೇಸಿ ವ್ಯಕ್ತಿ ಅದನ್ನು ‘ಚೋಲೆ’ ಬೇಕೇ ಚೋಲೆ ಎನ್ನುತ್ತಾ ಮಾರಾಟ ಮಾಡುತ್ತಾನೆ. ಇದನ್ನು ನೋಡಿದ ಮಹಿಳೆಯೊಬ್ಬರು ಅದು ಚೋಲೆ ಅಲ್ಲ ಕ್ಲೋಯ್​ ಎಂದು ಸರಿಪಡಿಸಲು ಪ್ರಯತ್ನಿಸುತ್ತಾರೆ. ಆದರೆ ಆ ವ್ಯಕ್ತಿ ಚೋಲೆನೋ ಕ್ಲೋಯ್​ನೋ ನಾನಂತೂ ಚೋಲೆ ಎಂದೇ ಹೇಳುತ್ತೇನೆ ಎನ್ನುತ್ತಾನೆ. ಈ ವ್ಯಕ್ತಿಯ ದೇಸಿ ಪ್ರೇಮಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read