ಇಂದು ಬಿಡುಗಡೆಯಾಗಲಿದೆ ‘ದೇಸಾಯಿ’ ಚಿತ್ರದ ಪ್ರೇಮ ಗೀತೆ

‘ಲವ್ 360’  ಖ್ಯಾತಿಯ ಪ್ರವೀಣ್ ಕುಮಾರ್ ಅಭಿನಯದ ಬಹುನಿರೀಕ್ಷಿತ ‘ದೇಸಾಯಿ’ ಚಿತ್ರದ ಫ್ಯಾಮಿಲಿ ಹಾಡೊಂದು ಇತ್ತೀಚಿಗಷ್ಟೇ youtube ನಲ್ಲಿ ಭರ್ಜರಿ ಸೌಂಡ್ ಮಾಡಿದ್ದು, ಇದೀಗ ‘ಒಲವ ಮೂಡುವ’ ಎಂಬ ಪ್ರೇಮ ಗೀತೆ ಇಂದು ಬಿಡುಗಡೆಗೆ ಸಜ್ಜಾಗಿದೆ. ಸಂಜೆ 6 ಗಂಟೆಗೆ ಅಶ್ವಿನಿ ಪುನೀತ್ ರಾಜಕುಮಾರ್ ಈ ಹಾಡನ್ನು ಲಾಂಚ್ ಮಾಡಲಿದ್ದಾರೆ. ಈ ಕುರಿತು ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ  ಹಂಚಿಕೊಂಡಿದೆ.

ಫ್ಯಾಮಿಲಿ ಎಂಟರ್ಟೈನ್ಮೆಂಟ್ ಕಥಾಹಂದರ ಹೊಂದಿರುವ ಈ ಚಿತ್ರವನ್ನು ನಾಗಿರೆಡ್ಡಿ ಭಡ  ನಿರ್ದೇಶಿಸಿದ್ದು, ವೀರಭದ್ರೇಶ್ವರ ಕ್ರಿಯೇಟಿವ್  ಫಿಲಂಸ್ ಬ್ಯಾನರ್ ನಲ್ಲಿ ಮಹಾಂತೇಶ ವಿ ಚೋಳಚಗುಡ್ಡ ನಿರ್ಮಾಣ ಮಾಡಿದ್ದಾರೆ. ವೀಣ್ ಕುಮಾರ್ ಗೆ ಜೋಡಿಯಾಗಿ ರಾಧ್ಯ ಅಭಿನಯಿಸಿದ್ದು,  ಮಧುಸೂದನ್ ರಾವ್, ಕಲ್ಯಾಣಿ, ಹರಿಣಿ, ಪ್ರಶಾಂತ್, ಮಂಜುನಾಥ್ ಹೆಗಡೆ, ಸೃಷ್ಟಿ, ಒರಟ ಪ್ರಶಾಂತ್, ತೆರೆ ಹಂಚಿಕೊಂಡಿದ್ದಾರೆ.

 

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read