ಒಂದೇ ಅಪಾರ್ಟ್‌ಮೆಂಟ್‌ನಲ್ಲಿ ಡೆಲಿವರಿ ; ಗ್ರಾಹಕರ ಸೋಮಾರಿತನಕ್ಕೆ ಪೋರ್ಟರ್ ಅಚ್ಚರಿ | Viral Video

ಪೋರ್ಟರ್ ಡೆಲಿವರಿ ಬಾಯ್ ಚೇತನ್ ಶುಕ್ಲಾ ಅವರು ಹಂಚಿಕೊಂಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ನಗೆಯ ಹೊನಲನ್ನು ಹರಿಸಿದೆ. ಲಕ್ನೋದ ಒಂದೇ ವಸತಿ ಸಂಕೀರ್ಣದ ಎರಡು ಟವರ್‌ಗಳ ನಡುವೆ ಕೇವಲ ಕೆಲವೇ ಮೀಟರ್ ಅಂತರದ ಡೆಲಿವರಿ ಇದಾಗಿದ್ದು, ಗ್ರಾಹಕರ ಸೋಮಾರಿತನಕ್ಕೆ ಚೇತನ್ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಟವರ್ ನಂಬರ್ 17 ರಿಂದ 19 ಕ್ಕೆ ಪಾರ್ಸೆಲ್ ತಲುಪಿಸಬೇಕಿದ್ದ ಈ ಆರ್ಡರ್ ಬಗ್ಗೆ ಮಾತನಾಡಿದ ಚೇತನ್, “ಪೋರ್ಟರ್‌ನಲ್ಲಿ ಅದ್ಭುತವಾದ ಆರ್ಡರ್ ಬಂದಿದೆ. ಇಲ್ಲಿಂದ ಪಿಕ್ ಅಪ್ ಮಾಡಿ ನೇರವಾಗಿ ಎದುರಿಗಿರುವ ಟವರ್ 19 ರಲ್ಲಿ ಕೊಡಬೇಕು. ಲಕ್ನೋದಲ್ಲಿ ವಿಚಿತ್ರವಾದ ಜನರಿದ್ದಾರೆ ಗುರು” ಎಂದು ತಮಾಷೆಯಾಗಿ ಹೇಳಿದ್ದಾರೆ.

ಪಾರ್ಸೆಲ್‌ನಲ್ಲಿದ್ದ ಗೇಮಿಂಗ್ ವಸ್ತುಗಳಾದ PS5 ಕಂಟ್ರೋಲರ್ ಮತ್ತು FC25 ಗೇಮ್ ಡಿಸ್ಕ್ ಅನ್ನು ತೋರಿಸಿರುವ ಚೇತನ್, ಇಷ್ಟೊಂದು ಹತ್ತಿರದ ಡೆಲಿವರಿಗೂ ಗ್ರಾಹಕರು ಸೋಮಾರಿತನ ತೋರಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಜಮಜಾ ಇದೆ. ಇಷ್ಟು ಸೋಮಾರಿತನನಾ? ಇಂತಹ ಸೋಮಾರಿತನ ತುಂಬಿದ ಡೆಲಿವರಿ. ಹೇಗಾದ್ರೂ ಮಾಡಿ ಮುಗಿಸಲೇಬೇಕಲ್ಲ” ಎಂದು ಅವರು ನಗುತ್ತಾ ಹೇಳಿದ್ದಾರೆ.

ಈ ಕಡಿಮೆ ದೂರದ ಡೆಲಿವರಿಗಾಗಿ ಚೇತನ್‌ಗೆ ಕೇವಲ 38 ರೂಪಾಯಿ ಸಂಭಾವನೆ ಸಿಕ್ಕಿದೆ. ಆರ್ಡರ್ ಪೂರ್ಣಗೊಂಡ ನಂತರ ಪೋರ್ಟರ್ ಅಪ್ಲಿಕೇಶನ್‌ನಲ್ಲಿ “ಧನ್ಯವಾದಗಳು, ಚೇತನ್ ಶುಕ್ಲಾ” ಎಂದು ತೋರಿಸಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಡೆಲಿವರಿ ಬಾಯ್ ಆರ್ಡರ್ ವಿವರಗಳನ್ನು ಸಾರ್ವಜನಿಕವಾಗಿ ಹಂಚಿಕೊಂಡಿದ್ದು ಸರಿಯೇ ಎಂಬ ಚರ್ಚೆಗೂ ಗ್ರಾಸವಾಗಿದೆ. ಕೆಲವರು ನಕ್ಕರೆ, ಇನ್ನೂ ಕೆಲವರು ಗ್ರಾಹಕರ ಗೌಪ್ಯತೆಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read