ಸತತ 18 ಗಂಟೆ ಕೆಲಸ ಮಾಡಿ ಬೈಕ್ ನಲ್ಲೇ ನಿದ್ರೆಗೆ ಜಾರಿ ಸಾವನ್ನಪ್ಪಿದ ಡೆಲಿವರಿ ಬಾಯ್.!

ಡೆಲಿವರಿ ಬಾಯ್ ಒಬ್ಬರು  ಸತತ 18 ಗಂಟೆ ಕೆಲಸ ಮಾಡಿ ಬೈಕ್ ನಲ್ಲೇ ನಿದ್ರೆಗೆ ಜಾರಿ ಸಾವನ್ನಪ್ಪಿದ ಘಟನೆ ಚೀನಾದಲ್ಲಿ ನಡೆದಿದೆ. 18 ಗಂಟೆಗಳ ಸುದೀರ್ಘ ಶಿಫ್ಟ್ ಮಾಡಿದ ನಂತರ ಡೆಲಿವರಿ ಬಾಯ್ ತಮ್ಮ ಬೈಕಿನಲ್ಲಿ ಕಿರು ನಿದ್ದೆ ಮಾಡುವಾಗ ಪ್ರಾಣ ಕಳೆದುಕೊಂಡರು.

ಯುವಾನ್ ಎಂಬ ಹೆಸರಿನ 55 ವರ್ಷದ ಚಾಲಕ ದಣಿವರಿಯದೆ ಕೆಲಸ ಮಾಡುತ್ತಿದ್ದನು ಮತ್ತು ‘ಆರ್ಡರ್ ಕಿಂಗ್’ ಎಂಬ ಹೆಸರನ್ನು ಗಳಿಸಿದ್ದನು.

ಅವರು ಸಾಯುವ ಒಂದು ತಿಂಗಳ ಮೊದಲು ಆರ್ಡರ್ ನೀಡಲು ತೆರಳುತ್ತಿದ್ದಾಗ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕಾಲು ಮುರಿತಕ್ಕೆ ಒಳಗಾಗಿದ್ದರು. ಸರಿಯಾದ ವಿಶ್ರಾಂತಿ ತೆಗೆದುಕೊಂಡು ಸಂಪೂರ್ಣವಾಗಿ ಚೇತರಿಸಿಕೊಳ್ಳುವ ಬದಲು ಮತ್ತೆ ಕೆಲಸಕ್ಕೆ ಹೋಗುತ್ತಾರೆ. ನಿದ್ದೆ ಮಾಡದೇ , ವಿಶ್ರಾಂತಿ ತೆಗೆದುಕೊಳ್ಳದೇ ಸತತವಾಗಿ ಕೆಲಸ ಮಾಡಿ ಮತ್ತೆ ಅನಾರೋಗ್ಯಕ್ಕೆ ಒಳಗಾಗುತ್ತಾರೆ.ಅಲ್ಲದೇ ಹಿರಿಯ ಮಗನ ಶಾಲಾ ಶುಲ್ಕಕ್ಕೆ ಹಣವನ್ನು ಸಂಪಾದಿಸಲು ಪ್ರಯತ್ನಿಸುತ್ತಿದ್ದರು. ಯುಹಾಂಗ್ ಜಿಲ್ಲೆಯ ಕ್ಸಿಯಾನ್ಲಿನ್ ಉಪ-ಜಿಲ್ಲಾ ಕಚೇರಿ ಅಧಿಕೃತ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಯುವಾನ್ “ತುರ್ತು ಚಿಕಿತ್ಸೆಯ ಹೊರತಾಗಿಯೂ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ” ಎಂದು ದೃಢಪಡಿಸಿದೆ. ಮನುಷ್ಯನಿಗೆ ನಿದ್ದೆ, ವಿಶ್ರಾಂತಿ ಬಹಳ ಅಗತ್ಯವಾಗಿದ್ದು, ಯಾವುದನ್ನೂ ಕಡೆಗಣಿಸಬಾರದು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read