ಬೆಂಗಳೂರು : ಬೆಂಗಳೂರಿನಲ್ಲಿ ‘ಡೆಲಿವರಿ ಬಾಯ್’ ಓರ್ವ ವಿದೇಶಿ ಮಾಡೆಲ್ ಗೆ ‘ಲೈಂಗಿಕ ಕಿರುಕುಳ’ ನೀಡಿದ ಘಟನೆ ನಡೆದಿದೆ. ಸೆಪ್ಟೆಂಬರ್ 17 ರಂದು ಬೆಂಗಳೂರಿನ ಆರ್ ಟಿ ನಗರದಲ್ಲಿ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಕಾಲೇಜು ವಿದ್ಯಾರ್ಥಿಯಾಗಿರುವ ಆರೋಪಿ ಕುಮಾರ್ ರಾವ್ ಈ ಕೃತ್ಯ ಎಸಗಿದ್ದಾನೆ. ಬ್ಲಿಂಕಿಟ್ ನಲ್ಲಿ ಡೆಲಿವರಿ ಬಾಯ್ ಆಗಿ ಪಾರ್ಟ್ ಟೈಮ್ ಕೆಲಸ ಮಾಡುತ್ತಿದ್ದ ಕುಮಾರ್ ಆರ್ಡರ್ ಡೆಲಿವರಿ ಮಾಡುವ ಸಮಯದಲ್ಲಿ ವಿದೇಶಿ ಮಾಡೆಲ್ ಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿಬಂದಿದೆ.
ಫುಡ್ ಡೆಲಿವರಿ ಮಾಡುವ ವೇಳೆ ಮಾಡೆಲ್ ಮೈ ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ. ಕುಮಾರ್ ರಾವ್ ನನ್ನು ಬಂಧಿಸಿರುವ ಆರ್ ಟಿ ನಗರದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
