Caught on Cam | ದೆಹಲಿಯಲ್ಲಿ ಬಾಲಕಿಯ ಭೀಕರ ಹತ್ಯೆ ಕೇಸ್; ಆಟಿಕೆ ಗನ್ ನಲ್ಲಿ ಆರೋಪಿಯನ್ನ ಬೆದರಿಸಿದ್ದೇ ಘಟನೆಗೆ ಕಾರಣ…?

ಗೆಳೆಯನೇ 16 ವರ್ಷದ ಬಾಲಕಿಯನ್ನು ಭೀಕರವಾಗಿ ಹತ್ಯೆ ಮಾಡಿದ ದೆಹಲಿ ಘಟನೆ ನಾಗರಿಕ ಸಮಾಜವನ್ನ ಬೆಚ್ಚಿಬೀಳಿಸಿದ್ದು ಹತ್ಯೆಗೆ ಕಾರಣವೇನು ಎಂಬುದನ್ನ ಪೊಲೀಸರು ಕಂಡುಹಿಡಿಯುತ್ತಿದ್ದಾರೆ. ಈ ನಡುವೆ ಬಾಲಕಿ ಆಟಿಕೆ ಗನ್ ತಂದು ಗೆಳೆಯನನ್ನ ಹೆದರಿಸಿದ್ದು ಘಟನೆಗೆ ಕಾರಣ ಎಂದು ತಿಳಿದುಬಂದಿದೆ.

ಭಾನುವಾರ ದೆಹಲಿಯಲ್ಲಿ 16 ವರ್ಷದ ಹುಡುಗಿಯೊಬ್ಬಳನ್ನು ಆಕೆಯ ಪ್ರಿಯಕರ 20ಕ್ಕೂ ಹೆಚ್ಚು ಬಾರಿ ಚಾಕುವಿನಿಂದ ಇರಿದು ಬಳಿಕ ಕಲ್ಲಿನಿಂದ ಜಜ್ಜಿ ಹತ್ಯೆ ಮಾಡಿದ್ದ.

ತಮ್ಮ ಮೂರು ವರ್ಷದ ಲಿವಿಂಗ್ ರಿಲೇಷನ್ ಶಿಪ್ ಸಂಬಂಧವನ್ನ ಕೊನೆಗೊಳಿಸಲು ಬಾಲಕಿ ಬಯಸಿದ್ದರಿಂದ ಇಬ್ಬರೂ ಇತ್ತೀಚೆಗೆ ಜಗಳವಾಡುತ್ತಿದ್ದರು ಎಂದು ಮೂಲಗಳು ತಿಳಿಸಿವೆ. ಪೊಲೀಸರ ಮೊರೆ ಹೋಗುವುದಾಗಿ ಬಾಲಕಿ ಆತನಿಗೆ ಬೆದರಿಕೆ ಹಾಕಿದ್ದಳಂತೆ. ಮೂಲಗಳ ಪ್ರಕಾರ ಹುಡುಗಿಯು ತನ್ನ ಕೈ ಮೇಲೆ ಮತ್ತೊಬ್ಬನ ಹೆಸರನ್ನ ಹಚ್ಚೆ ಹಾಕಿಸಿಕೊಂಡಿದ್ದು, ಇದೂ ಕೂಡ ಕಾರಣವಾಗಿರಬುಹುದು ಎನ್ನಲಾಗಿದೆ.

ಫ್ರಿಡ್ಜ್ ಮತ್ತು ಎಸಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ ಸಾಹಿಲ್, ವಾಯುವ್ಯ ದೆಹಲಿಯ ಶಹಬಾದ್ ಡೈರಿ ಪ್ರದೇಶದ ಜನನಿಬಿಡ ಪ್ರದೇಶದಲ್ಲಿ ಕಲ್ಲಿನಿಂದ ತಲೆಯನ್ನು ಒಡೆದು ಹಾಕುವ ಮೊದಲು ಹುಡುಗಿಯನ್ನು 20 ಕ್ಕೂ ಹೆಚ್ಚು ಬಾರಿ ಇರಿದಿದ್ದ. ಹತ್ತಿರದ ಭದ್ರತಾ ಕ್ಯಾಮರಾದಿಂದ ಸೆರೆಹಿಡಿಯಲಾದ ದೃಶ್ಯಗಳು ಬೆಚ್ಚಿಬೀಳಿಸಿವೆ. 20 ವರ್ಷದ ಆರೋಪಿಯನ್ನ ದೆಹಲಿ ಪೊಲೀಸರು ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿರುವ ಆತನ ಚಿಕ್ಕಮ್ಮನ ಮನೆಯಿಂದ ಬಂಧಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read