BIG NEWS: ಬೇಹುಗಾರಿಕಾ ಚಟುವಟಿಕೆ: ಪಾಕಿಸ್ತಾನಿ ಗೂಢಚಾರ ಅರೆಸ್ಟ್

ನವದೆಹಲಿ: ಭಾರತದ ಮೊಬೈಲ್ ಸಿಮ್, ದೇಶದ ಭದ್ರತೆಗೆ ಸಂಬಂಧಿಸಿದ ವಿಚಾರಗಳನ್ನು ಹಂಚಿಕೊಳ್ಳುತ್ತಿದ್ದ ಪಾಕಿಸ್ತಾನಿ ಗೂಢಚಾರನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ರಾಜಸ್ಥಾನದ ದೀಗ್ ಜಿಲ್ಲೆಯ ಗಂಗೋರಾ ಗ್ರಾಮದ ನಿವಾಸಿ ಕಾಸಿಮ್ (34) ಬಂಧಿತ ಬೇಹುಗಾರ. ಪಾಕಿಸ್ತಾನದ ಗುಪ್ತಚರ ಕಾರ್ಯಾಚರಣೆಗೆ ಸಹಾಯ ಮಾಡಿದ ಆರೋಪದಲ್ಲಿ ಈತನನ್ನು ಬಂಧಿಸಲಾಗಿದೆ.

2024ರ ಆಗಸ್ಟ್ ಮತ್ತು 2025ರ ಮಾರ್ಚ್ ನಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ಕಾಸಿಮ್ ಐಎಸ್ ಐ ಅಧಿಕಾರಿಗಳನ್ನು ಭೇಟಿಯಾಗಿ ಮಾಹಿತಿ ಹಂಚಿಕೊಂಡಿದ್ದ. ಪಾಕಿಸ್ತಾನ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕ ಹೊಂದಿದ್ದ ಎಂದು ತಿಳಿದುಬಂದಿದೆ. ಸದ್ಯ ಕಾಸಿಮ್ ನನ್ನು ಬಂಧಿಸಿ ರಿಮ್ಯಾಂಡ್ ನಲ್ಲಿ ಇರಿಸಲಾಗಿದೆ.

ಪಾಕ್ ಗುಪ್ತಚರ ಅಧಿಕಾರಿಗಳು ಭಾರತೀಯ ಮೊಬೈಲ್ ಸಿಮ್ ಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂಬ ಬಗ್ಗೆ ಭಾರತೀಯ ಗುಪ್ತಚರ ಅಧಿಕಾರಿಗಳಿಗೆ ಮಾಹಿತಿ ಬಂದಿತ್ತು. ಇಲ್ಲಿಯೇ ಸಿಮ್ ಖರೀದಿಸಿ ಇಲ್ಲಿಂದಲೇ ಗಡಿಯಾಚೆ ಮಾಹಿತಿ ರವಾನೆ ಬಗ್ಗೆ ಸುಳಿವು ಸಿಕ್ಕಿತ್ತು ಈ ನಿಟ್ಟಿನಲ್ಲಿ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read