Viral Video: ರಾಷ್ಟ್ರ ರಾಜಧಾನಿಯಲ್ಲಿ ಬೆಚ್ಚಿ ಬೀಳಿಸುವ ಘಟನೆ; ಹಗಲಿನಲ್ಲಿಯೇ ಪಿಸ್ತೂಲ್ ಹಿಡಿದು ವ್ಯಕ್ತಿ ಓಡಾಟ; ಹಿಡಿಯಲು ಹೋದಾಗ ಕತ್ತು ಸೀಳಿಕೊಂಡ ಆರೋಪಿ

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದಿದೆ. ವ್ಯಕ್ತಿಯೊಬ್ಬ ಒಂದು ಕೈನಲ್ಲಿ ಪಿಸ್ತೂಲು, ಮತ್ತೊಂದು ಕೈಯಲ್ಲಿ ಕತ್ತಿ ಹಿಡಿದು ಜನರನ್ನು ಭಯಭೀತಿಗೊಳಿಸಿದ್ದು, ಪೊಲೀಸರು ಹಾಗೂ ಜನ ಹಿಡಿಯಲು ಹೋದಾಗ ತನ್ನ ಕತ್ತು ಸೀಳಿಕೊಂಡಿದ್ದಾನೆ.

ಮಾರ್ಚ್ ಹದಿನಾರು ರಂದು ಸಂಜೆ ದೆಹಲಿಯ ನಾತು ಕಾಲೋನಿ ಚೌಕಿಯಲ್ಲಿ ಈ ಘಟನೆ ನಡೆದಿದ್ದು, ಕೃಷನ್ ಶೇರವಾಲ್ ಎಂಬಾತ ಕತ್ತಿ ಹಾಗೂ ಚಾಕು ಹಿಡಿದು ಅಡ್ಡಾಡಿದ್ದಾನೆ. ಇದರಿಂದ ಭಯಭೀತರಾದ ಜನ ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ. ಕೆಲವರು ಕೂಡಲೇ ಪೊಲೀಸರಿಗೂ ಸಹ ಈ ವಿಷಯ ತಿಳಿಸಿದ್ದಾರೆ.

ಪೊಲೀಸರು ಸ್ಥಳಕ್ಕೆ ಬರುವಷ್ಟರಲ್ಲಿಯೇ ಆರೋಪಿ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿದ್ದ ಎನ್ನಲಾಗಿದ್ದು, ಪೊಲೀಸರು ಆತನನ್ನು ಸುತ್ತುವರೆದ ವೇಳೆ ಕತ್ತಿಯಿಂದ ತನ್ನ ಕತ್ತನ್ನು ಇರಿದುಕೊಂಡಿದ್ದಾನೆ.

ಇದರ ಪರಿಣಾಮವಾಗಿ ಆತ ತೀವ್ರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಆರೋಪಿ ವಿರುದ್ಧ ವಿವಿಧ ಕಲಂಗಳ ಅಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಯಾವ ಕಾರಣಕ್ಕೆ ಈ ರೀತಿ ಮಾಡಿದ್ದಾನೆ ಎಂಬುದರ ಕುರಿತು ತನಿಖೆ ನಡೆಸುತ್ತಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read