ಜಡ್ಜ್ ಮನೆಯಲ್ಲಿ ಕಂತೆ ಕಂತೆ ಹಣ ಪತ್ತೆ ಪ್ರಕರಣ: ನ್ಯಾ.ಯಶವಂತ್ ವರ್ಮಾ ಮೇಲೆ FIR ದಾಖಲಿಸಿದ್ದ ಸಿಬಿಐ

ದೆಹಲಿ ಹೈಕೋರ್ಟ್ ಜಡ್ಜ್ ಯಶವಂತ ವರ್ಮಾ ಮನೆಯಲ್ಲಿ ಕಂತ ಕಂತೆ ಹಣ ಪತ್ತೆ ಪ್ರಕರಣದ ಬೆನ್ನಲ್ಲೇ ಈ ಹಿಂದೆ ಸಿಬಿಐ ಯಶವಂತ ವರ್ಮಾ ವಿರುದ್ಧ ಎಫ್ಐಆರ್ ದಾಖಲಿಸಿದೆದ್ದ ಪ್ರಕರಣ ಮತ್ತೆ ಮುನ್ನೆಲೆಗೆ ಬಂದಿದೆ.

ಮನೆಯಲ್ಲಿ ಹಣ ಪತ್ತೆ ಪ್ರಕರಣದಿಂದ ಸುದ್ದಿಯಲ್ಲಿದ್ದ ನ್ಯಾ.ಯಶವಂತ್ ವರ್ಮಾ ಅವರನ್ನು ಪ್ರಕರಣವೊಂದರಲ್ಲಿ ಆರೋಪಿಯನ್ನಾಗಿ ಮಾಡಿ ಸಿಬಿಐ ಎಫ್ಐಆರ್ ದಾಖಲಿಸಿತ್ತು.

ಬ್ಯಾಂಕ್ ನಿಂದ ಪಡೆದ ಸಾಲ ದುರುಪಯೋಗ ಆರೋಪದಡಿ ಸಿಂಭಾವೋಲಿ ಶುಗರ್ಸ್ ಕಂಪನಿ ವಿರುದ್ಧ 2018ರಲ್ಲಿ ಸಿಬಿಐ ಮತ್ತು ಇಡಿ ಎಫ್ಐಆರ್ ದಾಖಲಿಸಿತ್ತು. ಈ ಕಂಪನಿಯಲ್ಲಿ ನ್ಯಾ.ಯಶವಂತ್ ವರ್ಮಾ ಕಾರ್ಯನಿರ್ವಾಹಕೇತರ ನಿರ್ದೇಶಕರಾಗಿದ್ದರು. ಸಿಬಿಐ ಯಶವಂತ್ ವರ್ಮಾ ಅವರನ್ನು 10ನೇ ಆರೋಪಿಯನ್ನಾಗಿ ಉಲ್ಲೇಖ ಮಾಡಿತ್ತು. ವಂಚನೆ, ದುರ್ನಡತೆ, ಕ್ರಿಮಿನಲ್ ಪಿತೂರಿ ಅಡಿ ಯಶವಂತ್ ವರ್ಮ ಆಡಿ ಪ್ರಕರಣ ದಾಖಲಾಗಿತ್ತು.

ಯಶವಂತ್ ವರ್ಮಾ 2014ರಲ್ಲಿ ಅಲಹಾಬಾದ್ ಹೈಕೋರ್ಟ್ ಜಡ್ಜ್ ಆಗುವ ಮೊದಲು ಕಂಪನಿಯ ಕಾರ್ಯನಿರ್ವಾಹಕೇತರ ನಿರ್ದೇಶಕರಾಗಿದ್ದರು. ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿ ಆದೇಶಿಸಿದ್ದ ಅಲಹಬಾದ್ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ಕಳೆದ ವರ್ಷ ರದ್ದುಗೊಳಿಸಿತ್ತು. ಅಲಹಾಬಾದ್ ಹೈಕೋರ್ಟ್ ನಿಂದ ಬಡ್ತಿ ಪಡೆದು ದೆಹಲಿ ಹೈಕೋರ್ಟ್ ಗೆ ಯಶವಂತ್ ವರ್ಮಾ ವರ್ಗಾವಣೆಗೊಂಡಿದ್ದರು. ಇದೀಗ ಯಶವಂತ್ ವರ್ಮಾ ಮನೆಯಲ್ಲಿ ಹಣ ಪತ್ತೆ ಪ್ರಕರಣದ ಬೆನ್ನಲ್ಲೇ ಅವರನ್ನು ಸುಪ್ರೀಂ ಕೋರ್ಟ್ ಮತ್ತೆ ಅಲಹಾಬಾದ್ ಹೈಕೋರ್ಟ್ ಗೆ ವರ್ಗಾವಣೆ ಮಾಡಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read