ದೆಹಲಿಯ ಭಾರೀ ಭದ್ರತಾ ಪ್ರದೇಶದಲ್ಲಿರುವ ಮಹಾರಾಷ್ಟ್ರ ಸದನ ಹಾಗೂ ಇಂಡಿಯಾ ಗೇಟ್ ಸರ್ಕಲ್ ಬಳಿ ಬೈಕ್‌ನಲ್ಲಿ ಬಂದ ಕಳ್ಳನೊಬ್ಬ ಟಿವಿ ವರದಿಗಾರನ ಮೊಬೈಲ್ ಕಸಿಯಲು ನಡೆಸಿದ ವಿಫಲ ಯತ್ನದ ದೃಶ್ಯಾವಳಿಯೊಂದು ವೈರಲ್ ಆಗಿದೆ.
ಟ್ವಿಟರ್‌ನಲ್ಲಿ ಈ ವಿಚಾರವನ್ನು ಹೇಳಿಕೊಂಡಿರುವ ವರದಿಗಾರ ಮಾನವ್ ಯಾದವ್, ವಿಡಿಯೋ ತುಣುಕನ್ನು ಇದೇ ವೇಳೆ ಶೇರ್ ಮಾಡಿಕೊಂಡಿದ್ದಾರೆ. ಘಟನೆ ನಡೆದ ವೇಳೆ ಸುದ್ದಿ ವಾಹಿನಿಯ ಕ್ಯಾಮೆರಾಮನ್ ರಸ್ತೆಯ ಮತ್ತೊಂದು ಬದಿಯಿಂದ ಸಕ್ರಿಯವಾಗಿದ್ದ ಕಾರಣ ಈ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದೆ.
“ನಮ್ಮ ಕ್ಯಾಮೆರಾ ಆನ್ ಆಗಿತ್ತು…… ಅಪಾಚೆ ಬೈಕ್‌ನಲ್ಲಿದ್ದ ಯುವಕನೊಬ್ಬ ನಮ್ಮತ್ತ ಗಮನಿಸುತ್ತಿದ್ದ. ನಾನು ಅದನ್ನು ನಿರ್ಲಕ್ಷಿಸಿದೆ. ಏನನ್ನೋ ನೋಡಲೆಂದು ನನ್ನ ಫೋನ್ ತೆಗೆದು ಕೈಯಲ್ಲಿಟ್ಟುಕೊಂಡ ವೇಳೆ ಇದಾಗಿದೆ,” ಎಂದು ಟ್ವಿಟರ್‌ನಲ್ಲಿ ವಿಡಿಯೋ ಶೇರ್ ಮಾಡಿಕೊಂಡು ಹೇಳಿಕೊಂಡಿದ್ದಾರೆ ಯಾದವ್. ಕಳ್ಳನ ಈ ಯತ್ನ ವಿಫಲವಾಗಿದೆ.
“ಪ್ರಗತಿ ಮೈದಾನದ ಸುರಂಗದ ಬಳಿ ಲೂಟಿಯ ಘಟನೆ ಬಳಿಕ, ಈ ಘಟನೆಯ ಕುರಿತು ನಿಮ್ಮೊಂದಿಗೆ ಶೇರ್ ಮಾಡಬೇಕೆಂದೆನಿಸಿತು. ದೆಹಲಿಯಲ್ಲಿ ನೀವೆಲ್ಲೇ ಹೋದರೂ ನಿಮ್ಮ ಹಾಗೂ ನಿಮ್ಮ ವಸ್ತುಗಳ ಸುರಕ್ಷತೆಯ ಕುರಿತು ಕಾಳಜಿ ಇರಲಿ,” ಎಂದು ಯಾದವ್ ಇದೇ ವೇಳೆ ಹೇಳಿಕೊಂಡಿದ್ದಾರೆ.
https://twitter.com/ManavLive/status/1673238556423364609?ref_src=twsrc%5Etfw%7Ctwcamp%5Etweetembed%7Ctwterm%5E1673238556423364609%7Ctwgr%5Eb898b994463f87e846164ba4ad2aec6a3b386849%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fdelhi-crime-tv-reporter-foils-phone-snatching-attempt-by-biker-near-india-gate-shares-video-watch
https://twitter.com/ManavLive/status/1673238561456558080?ref_src=twsrc%5Etfw%7Ctwcamp%5Etweetembed%7Ctwterm%5E1673245267636916226%7Ctwgr%5Eb898b994463f87e846164ba4ad2aec6a3b386849%7Ctwcon%5Es2_&ref_url=https%3A%2F%2Fwww.freepressjournal.in%2Fviral%2Fdelhi-crime-tv-reporter-foils-phone-snatching-attempt-by-biker-near-india-gate-shares-video-watch