ಕೊಲೆ ಮತ್ತು ದರೋಡೆ ಆರೋಪ ಪ್ರಕರಣದಲ್ಲಿನ ಇಬ್ಬರನ್ನ ದೆಹಲಿ ಪೊಲೀಸ್ ಅಧಿಕಾರಿಯೊಬ್ಬರು ಎದುರಿಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅವರಲ್ಲಿ ಒಬ್ಬ ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಪೊಲೀಸರ ಮೇಲೆ ಗುಂಡು ಹಾರಿಸಲು ಪ್ರಯತ್ನಿಸಿದ. ಅದಾಗ್ಯೂ ಪರಿಸ್ಥಿತಿಯನ್ನ ಸಮರ್ಥವಾಗಿ ಎದುರಿಸಿದ ಹೆಡ್ ಕಾನ್‌ಸ್ಟೆಬಲ್ ಮನೋಜ್, ದೆಹಲಿಯ ನಿಹಾಲ್ ವಿಹಾರ್ ಪ್ರದೇಶದಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.
ಪೊಲೀಸರ ಪ್ರಕಾರ, ಆರೋಪಿಗಳಾದ ಧ್ಯಾನ್ ಸಿಂಗ್ (26) ಮತ್ತು ನವನೀತ್ ಬಳಿ ಕಂಟ್ರಿ ಮೇಡ್ ಪಿಸ್ತೂಲ್ ಇತ್ತು. ಕಾನ್‌ಸ್ಟೇಬಲ್ ಅರೋಪಿಗಳನ್ನು ಹಿಡಿಯಲು ಅವರ ಬಳಿ ಬಂದಾಗ, ಒಬ್ಬ ಆರೋಪಿ ಓಡಿಹೋಗುತ್ತಾನೆ.
ಇನ್ನೊಬ್ಬ ತನ್ನ ಪಿಸ್ತೂಲ್ ಅನ್ನು ಹೆಡ್ ಕಾನ್ಸ್ ಟೇಬಲ್ ಕಡೆ ತೋರಿಸಿ ಗುಂಡು ಹಾರಿಸಲು ಮುಂದಾಗುತ್ತಾ ಬೆದರಿಸುತ್ತಾನೆ. ತಕ್ಷಣ ಹೆಡ್ ಕಾನ್ಸ್ ಟೇಬರ್ ಆರೋಪಿಯನ್ನ ಹಿಡಿದು ಪಿಸ್ತೂಲ್ ಕಿತ್ತುಕೊಳ್ಳುತ್ತಾರೆ. ಈ ವೇಳೆ ಸ್ಥಳೀಯರೂ ಸಹ ಆರೋಪಿಯನ್ನ ಹಿಡಿಯಲು ಮುಂದಾಗಿ ಥಳಿಸುತ್ತಾರೆ. ಇಡೀ ಕೃತ್ಯ ಸಿಸಿಕ್ಯಾಮೆರಾದಲ್ಲಿ ಸೆರೆಯಾಗಿದೆ.
https://twitter.com/DelhiPolice/status/1643279155214323714?ref_src=twsrc%5Etfw%7Ctwcamp%5Etweetembed%7Ctwterm%5E1643279155214323714%7Ctwgr%5E17128394f93361a2212b8a1c884d22e909749577%7Ctwcon%5Es1_&ref_url=https%3A%2F%2Fwww.freepressjournal.in%2Findia%2Fdelhi-crime-cop-overpowers-armed-murder-robbery-accused-in-nihal-vihar-cctv-video-emerges