ಗರ್ಲ್​ಫ್ರೆಂಡ್​ ತಂದೆ ಹಾಗೂ ಸಹೋದರರಿಂದ ಯುವಕನ ಬರ್ಬರ ಹತ್ಯೆ;‌ ಶಾಕಿಂಗ್‌ ದೃಶ್ಯ ಸಿಸಿ ಟಿವಿಯಲ್ಲಿ ಸೆರೆ

ತಾನು ಪ್ರೀತಿಸುತ್ತಿದ್ದ ಬಾಲಕಿಯ ತಂದೆ ಹಾಗೂ ಸಹೋದರರು ಸೇರಿ ಚಾಕುವಿನಿಂದ 25 ವರ್ಷದ ಯುವಕನನ್ನು ಕೊಲೆ ಮಾಡಿದ ಘಟನೆಯು ದೆಹಲಿಯ ಜಾಫ್ರಾಭಾದ್​ನಲ್ಲಿ ಸಂಭವಿಸಿದೆ.

ಮೃತ ಯುವಕನನ್ನು ದೆಹಲಿಯ ಬ್ರಹ್ಮಪುರಿ ನಿವಾಸಿ ಸಲ್ಮಾನ್​ ಎಂದು ಗುರುತಿಸಲಾಗಿದೆ. ಪೊಲೀಸ್​ ಅಧಿಕಾರಿಗಳು ಈ ಪ್ರಕರಣ ಸಂಬಂಧ ಮಾಹಿತಿ ನೀಡಿದ್ದು, ಸೋಮವಾರ ಸಂಜೆ 5:15 ರ ಸುಮಾರಿಗೆ ಜಾಫ್ರಾಬಾದ್ ಪ್ರದೇಶದ ಚೌಹಾನ್ ಬಂಗೇರ್‌ನ ಕಲ್ಯಾಣ್ ಚಿತ್ರಮಂದಿರದ ಬಳಿ ಯುವಕನನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಸಲ್ಮಾನ್​ ಕುತ್ತಿಗೆ ಹಾಗೂ ಎದೆಗೆ ಚಾಕುವಿನಿಂದ ಇರಿಯಲಾಗಿದ್ದು ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ. ಪ್ರಾಥಮಿಕ ತನಿಖೆಯ ವೇಳೆ ಈತ ಕಳೆದ ಎರಡು ವರ್ಷಗಳಿಂದ ಹುಡುಗಿಯೊಂದಿಗೆ ಸ್ನೇಹ ಹೊಂದಿದ್ದ ಎನ್ನಲಾಗಿದೆ. ಇದು ಹುಡುಗಿಯ ಮನೆಯವರ ದ್ವೇಷಕ್ಕೆ ಕಾರಣವಾಗಿತ್ತು.

ಇದರಿಂದ ಕೋಪಗೊಂಡ ಬಾಲಕಿಯ ತಂದೆ ಹಾಗೂ ಸಹೋದರರಾದ ಮೊಹ್ಸಿನ್​ ಹಾಗೂ ಅಪ್ರಾಪ್ತ ಸೇರಿಕೊಂಡು ಸಲ್ಮಾನ್​ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಮನ್ಸೂರ್​ ಹಾಗೂ ಅವರ ಇಬ್ಬರು ಮಕ್ಕಳ ಮೇಲೆ ಕೊಲೆ ಪ್ರಕರಣ ದಾಖಲಾಗಿದೆ. ಸದ್ಯ ಅವರು ತಲೆಮೆರೆಸಿಕೊಂಡಿದ್ದಾರೆ. ಅವರನ್ನು ಪತ್ತೆ ಹಚ್ಚಲು ಎಲ್ಲಾ ಪ್ರಯತ್ನ ಮಾಡ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರ.

https://twitter.com/i/status/1681235145750368257

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read