11 ವರ್ಷದ ಬಾಲಕಿ ಹತ್ಯೆ ಪ್ರಕರಣ ಪತ್ತೆ ಹಚ್ಚಲು ನೆರವಾಯ್ತು ಮಿಸ್ಡ್ ಕಾಲ್….!

ನವದೆಹಲಿಯ ನಗ್ಲೊಂಯಿ ಪ್ರಾಂತ್ಯದಲ್ಲಿ ಫೆಬ್ರವರಿ 9ರಂದು ಅಪಹರಣವಾಗಿ ಹತ್ಯೆಗೀಡಾದ 11 ವರ್ಷದ ಬಾಲಕಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. 21 ವರ್ಷದ ರೋಹಿತ್ ಎಂಬಾತ ಈ ಅಮಾನುಷ ಕೃತ್ಯ ಎಸಗಿದ್ದು, ಆತನನ್ನು ಈಗ ಬಂಧಿಸಲಾಗಿದೆ.

ಫೆಬ್ರವರಿ 9 ರಂದು ಎಂದಿನಂತೆ ಬಾಲಕಿ ಶಾಲೆಗೆ ತೆರಳಲು 7:30ಕ್ಕೆ ಸಿದ್ಧವಾಗಿದ್ದು, ಆಕೆಯನ್ನು ಶಾಲೆಗೆ ಡ್ರಾಪ್ ಮಾಡುತ್ತಿದ್ದ ಸಹೋದರ ಅಂದು ಹೋಗಲು ಸಾಧ್ಯವಾಗಿರಲಿಲ್ಲ ಹೀಗಾಗಿ ಆಕೆ ಬಸ್ಸಿನಲ್ಲಿ ತೆರಳಿದ್ದಳು.

ಆದರೆ 11 ಗಂಟೆಗೆ ವಾಪಸ್ ಬಾರದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಎಲ್ಲೆಡೆ ಹುಡುಕಾಡಿ ಸಿಗದ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಿದ್ದರು. ಇದರ ಮಧ್ಯೆ 11-50 ರ ಸುಮಾರಿಗೆ ಬಾಲಕಿ ತಾಯಿಯ ಮೊಬೈಲ್ ಗೆ ಮಿಸ್ ಕಾಲ್ಡ್ ಒಂದು ಬಂದಿತ್ತು.

ಅದಕ್ಕೆ ವಾಪಸ್ ಕರೆ ಮಾಡಿದಾಗ ಸ್ವಿಚ್ಡ್ ಆಫ್ ಆಗಿತ್ತು. ಅಪಹರಣ ಪ್ರಕರಣ ದಾಖಲಿಸಿಕೊಂಡಿದ್ದು ಪೊಲೀಸರು ಈ ಕರೆಯ ಬೆನ್ನತ್ತಿ ಹೋದಾಗ ಘೋರ ಕೃತ್ಯ ಬಹಿರಂಗವಾಗಿದೆ. ರೋಹಿತ್ ಎಂಬಾತನನ್ನು ಈಗ ಬಂಧಿಸಲಾಗಿದ್ದು, ಅಪಹರಣ ಹಾಗೂ ಕೊಲೆ ಯಾವ ಕಾರಣಕ್ಕೆ ನಡೆದಿದೆ ಎಂಬುದರ ವಿಚಾರಣೆ ನಡೆಸಲಾಗುತ್ತಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read