ಬೈಕ್ ನಲ್ಲಿ ಸಂಚರಿಸುತ್ತಲೇ ಪ್ರೇಮಿಗಳ ರೊಮ್ಯಾನ್ಸ್: ವಿಡಿಯೋ ವೈರಲ್

ಪ್ರೇಮಿಗಳು ಪ್ರೀತಿಯ ಎಲ್ಲೆಗಳನ್ನು ಮೀರುವುದು ಮಾತ್ರವಲ್ಲದೆ ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸುವ ಅನೇಕ ಘಟನೆಗಳು ಆಗಾಗ್ಗೆ ನಡೆಯುತ್ತಿರುತ್ತವೆ. ಇದೀಗ ವೈರಲ್ ಆಗಿರೋ ವಿಡಿಯೋ ದೆಹಲಿಯಲ್ಲಿ ನಡೆದಿರುವಂಥದ್ದು. ಪ್ರೇಮಿಗಳು ಬೈಕ್ ನಲ್ಲಿ ಸಂಚಾರ ಮಾಡುತ್ತಿರಬೇಕಿದ್ದರೆ, ರೊಮ್ಯಾನ್ಸ್ ಮಾಡಿದ್ದಾರೆ. ಸವಾರ ಬೈಕ್ ಚಲಾಯಿಸುತ್ತಿದ್ದರೆ, ಆತನ ಪ್ರೇಯಸಿ ಮುಂಬದಿ ಕುಳಿತು ಪ್ರೇಮಿಯನ್ನು ತಬ್ಬಿ ಹಿಡಿದುಕೊಂಡಿದ್ದಾಳೆ.

ಈ ರೀತಿ ಮಾಡುವುದು ಅಪಾಯಕಾರಿ ಎಂದು ಗೊತ್ತಿದ್ದರೂ, ಪ್ರೇಮಿಗಳು ಸಂಚಾರ ನಿಯಮವನ್ನು ಉಲ್ಲಂಘಿಸಿ ಅಪಾಯವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಬೈಕ್ ನ ಹಿಂಬದಿಯಲ್ಲಿ ಬರುತ್ತಿದ್ದ ಕಾರೊಂದು ಘಟನೆಯ ದೃಶ್ಯವನ್ನು ಚಿತ್ರೀಕರಿಸಿದೆ.

ಈ ಘಟನೆಯನ್ನು ಜುಲೈ 16 ರಂದು ಟ್ವಿಟರ್ ಬಳಕೆದಾರರೊಬ್ಬರು ಪೋಸ್ಟ್ ಮಾಡಿದ್ದಾರೆ. ಇದು ದೆಹಲಿಯ ಮಂಗೋಲ್ಪುರಿಯಲ್ಲಿರುವ ಔಟರ್ ರಿಂಗ್ ರೋಡ್ ಫ್ಲೈಓವರ್ನಲ್ಲಿ ನಡೆದಿದೆ ಎಂದು ಹೇಳಲಾಗಿದೆ. ಈಡಿಯಟ್ಸ್ ಆಫ್ ಡೆಲ್ಲಿ ಎಂದು ಶೀರ್ಷಿಕೆ ನೀಡಿ ವಿಡಿಯೋ ಪೋಸ್ಟ್ ಮಾಡಲಾಗಿದೆ. ವಿಡಿಯೋದಲ್ಲಿ, ಯುವತಿಯೊಬ್ಬರು ಬೈಕ್ ನ ಟ್ಯಾಂಕ್ ಮೇಲೆ ಕುಳಿತುಕೊಂಡು ಪ್ರೇಮಿಯನ್ನು ತಬ್ಬಿ ಹಿಡಿದಿರುವುದನ್ನು ಕಾಣಬಹುದು.

ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಪ್ರೇಮಿಗಳ ಬೇಜವಾಬ್ದಾರಿ ಮತ್ತು ಅಶ್ಲೀಲ ನಡವಳಿಕೆಗಾಗಿ ಹಲವರು ಟೀಕಿಸಿದ್ದಾರೆ. ಸದ್ಯ, ಈ ವಿಡಿಯೋ ದೆಹಲಿ ಪೊಲೀಸರ ಗಮನ ಸೆಳೆದಿದ್ದು, ಪ್ರೇಮಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

https://twitter.com/Buntea/status/1680593519923314688?ref_src=twsrc%5Etfw%7Ctwcamp%5Etweetembed%7Ctwterm%5E1680593519923314688%7Ctwgr%5E20b008121fdc8b1f24378ac39f85de7a9f5608c9%7Ctwcon%5Es1_&ref_url=https%3A%2F%2Fwww.news18.com%2Fviral%2Fdelhi-couples-romance-on-speeding-bike-draws-police-attention-video-surfaces-online-8364883.html

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read