ಗಿಟಾರ್​ ಕಸಿದು ಸಂಗೀತಗಾರನಿಗೆ ಅವಮಾನ ಮಾಡಿದ ಪೊಲೀಸರು: ನೆಟ್ಟಿಗರು ಕಿಡಿ

ನವದೆಹಲಿ: ಗಿಟಾರ್ ನುಡಿಸದಂತೆ ಸಂಗೀತಗಾರನೊಬ್ಬನನ್ನು ದೆಹಲಿ ಪೊಲೀಸರು ತಡೆದ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ಕನ್ನಾಟ್ ಪ್ಲೇಸ್‌ನಲ್ಲಿ ವ್ಯಕ್ತಿಯೊಬ್ಬ ರಸ್ತೆಯಲ್ಲಿ ಹಾಡನ್ನು ನುಡಿಸುತ್ತಿದ್ದಾಗ ಈ ಘಟನೆ ನಡೆದಿದೆ.

ಈತನ ಹಾಡು ಕೇಳಲು ಹಲವಾರು ಜನರು ಜಮಾಯಿಸಿದ್ದರು. ಆದರೆ ಅವರನ್ನು ಪೊಲೀಸರು ಥಟ್ಟನೆ ತಡೆದರು. ಈ ವಿಡಿಯೋವನ್ನು ನಟ ರಾಜೇಶ್ ತೈಲಂಗ್ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ ಮತ್ತು ಇಂಟರ್ನೆಟ್ ಅನ್ನು ಕೆರಳಿಸಿದ್ದಾರೆ.

ಜನವರಿ 4 ರಂದು ರಾಜೇಶ್ ತೈಲಾಂಗ್ ಅವರು ವಿಡಿಯೋ ಹಂಚಿಕೊಂಡಿದ್ದಾರೆ. 15 ಸೆಕೆಂಡುಗಳ ಕ್ಲಿಪ್‌ನಲ್ಲಿ, ಸಂಗೀತಗಾರರೊಬ್ಬರು ಗಿಟಾರ್ ನುಡಿಸುವುದನ್ನು ಕಾಣಬಹುದು. ಇದ್ದಕ್ಕಿದ್ದಂತೆ ಒಬ್ಬ ಪೋಲೀಸ್ ಬಂದು ಅವನ ಗಿಟಾರ್ ಕೇಸ್ ಮುಚ್ಚಿದ್ದಾರೆ. ಸಂಗೀತಗಾರನ ಬಳಿಗೆ ಬಂದು ಗಿಟಾರ್‌ ಕಸಿದುಕೊಂಡು ನಿಮಗೆ ನನ್ನ ಮಾತು ಕೇಳಿಸುತ್ತಿಲ್ಲವೇ ಎದ್ದು ನಿಲ್ಲು ಎಂದು ಬೈದಿರುವುದನ್ನು ಕೇಳಬಹುದು.

ಸಂಗೀತಗಾರನೂ ಸಿಟ್ಟಿಗೆದ್ದು, ಬೈದಿದ್ದಾನೆ. ಇಬ್ಬರ ನಡುವೆ ವಾಗ್ವಾದ ಆರಂಭವಾಗಿದ್ದು, ಜನರು ಪೊಲೀಸರ ವಿರುದ್ಧ ಕಿಡಿ ಕಾರುತ್ತಿದ್ದಾರೆ. ನೆಟ್ಟಿಗರು ಪೊಲೀಸರಿಗೆ ಛೀಮಾರಿ ಹಾಕುತ್ತಿದ್ದಾರೆ.

https://twitter.com/rajeshtailang/status/1610702489220964353?ref_src=twsrc%5Etfw%7Ctwcamp%5Etweetembed%7Ctwterm%5E1610702489220964353%7Ctwgr%5Eb0de34ca8995edbd4b08b68a5b077660f4c63131%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fdelhi-cop-stops-musician-from-performing-at-connaught-place-internet-is-furious-2317633-2023-01-05

https://twitter.com/schatrath/status/1610838613700345856?ref_src=twsrc%5Etfw%7Ctwcamp%5Etweetembed%7Ctwterm%5E1610838613700345856%7Ctwgr%5Eb0de34ca8995edbd4b08b68a5b077660f4c63131%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fdelhi-cop-stops-musician-from-performing-at-connaught-place-internet-is-furious-2317633-2023-01-05

https://twitter.com/roshan_b/status/1610741726217637890?ref_src=twsrc%5Etfw%7Ctwcamp%5Etweetembed%7Ctwterm%5E1610741726217637890%7Ctwgr%5Eb0de34ca8995edbd4b08b68a5b077660f4c63131%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fdelhi-cop-stops-musician-from-performing-at-connaught-place-internet-is-furious-2317633-2023-01-05

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read