Viral Video | ಮಧುರ ಕಂಠದಿಂದ ನೆಟ್ಟಿಗರ ಮನಸೂರೆಗೊಂಡ ದೆಹಲಿ ಪೊಲೀಸ್ ಪೇದೆ

ತಮ್ಮ ಮಧುರ ಕಂಠದಿಂದ ನೆಟ್ಟಿಗರ ಮನಗೆದ್ದಿರುವ ದೆಹಲಿ ಪೊಲೀಸ್ ಪೇದೆಯೊಬ್ಬರು ಆರಿಜಿತ್‌ ಸಿಂಗ್‌ರ ’ತುಮ್ ಹೀ ಹೋ’ ಹಾಡಿಗೆ ದನಿಗೂಡಿದ್ದಾರೆ.

ಹತ್ತು ವರ್ಷಗಳ ಹಿಂದೆ ಬಿಡುಗಡೆಯಾದ ’ಆಶಿಕಿ 2’ ಚಿತ್ರದ ಈ ಗೀತೆಯನ್ನು ಪೇದೆ ರಜತ್‌ ರಾಥೋರ್‌ ಹಾಡಿದ್ದು, ತಮ್ಮ ಈ ಗಾಯನದ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಆದಿತ್ಯ ರಾಯ್ ಕಪೂರ್‌ ಹಾಗೂ ಶ್ರದ್ಧಾ ಕಪೂರ್‌ ಅಭಿನಯದ ಈ ಚಿತ್ರದ 10ನೇ ವರ್ಷದ ಆಚರಣೆ ಪ್ರಯುಕ್ತ ರಜತ್ ಈ ವಿಶೇಷ ಪ್ರದರ್ಶನ ನೀಡಿದ್ದಾರೆ.

ಗಾಯನ ಪ್ರಿಯ ಪೇದೆ ತಮ್ಮ ಮಧುರ ಧ್ವನಿಯಲ್ಲಿ ಹಾಡಿರುವ ಅನೇಕ ಹಾಡುಗಳ ವಿಡಿಯೋಗಳನ್ನು ಇನ್ಸ್ಟಾಗ್ರಾಂನಲ್ಲಿ ಶೇರ್‌ ಮಾಡಿದ್ದಾರೆ. ಇವರ ಗಾಯನವನ್ನು ಮೆಚ್ಚಿಕೊಂಡಿರುವ ನೆಟ್ಟಿಗರು, “ಅಮೇಜ಼ಿಂಗ್”, “ಮಧುರ”, “ಸುಮಧುರ” ಎಂದೆಲ್ಲಾ ಕಾಮೆಂಟ್‌ಗಳನ್ನು ಹಾಕಿದ್ದಾರೆ.

https://youtu.be/Cx5OHEaGMc0

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read