ಪತ್ನಿ ಯೂಟ್ಯೂಬ್‌ ಖಾತೆಗೆ ಅನುಯಾಯಿಗಳನ್ನು ಹೆಚ್ಚಿಸಲು ವಿದ್ಯಾರ್ಥಿಗಳಿಗೆ ಶೇರ್‌ ಮಾಡಿದ ಡೀನ್;‌ ಇದರಿಂದ ಅವರಿಗೇನು ಲಾಭವೆಂದು ಮೂಗುಮುರಿದ ನೆಟ್ಟಿಗರು

ಡೀನ್ ಒಬ್ಬರು ಇತ್ತೀಚೆಗೆ ತಮ್ಮ ಹೆಂಡತಿಯ ಯೂಟ್ಯೂಬ್ ಚಾನೆಲ್ ಲಿಂಕ್ ಅನ್ನು ಹಂಚಿಕೊಂಡು ಭಾರಿ ಸುದ್ದಿಯಾಗಿದ್ದಾರೆ. ತಮ್ಮ ಮಕ್ಕಳನ್ನು ಪ್ರೋತ್ಸಾಹಿಸಲು ವಿದ್ಯಾರ್ಥಿಗಳಿಗೆ ಹೆಂಡತಿಯ ಯುಟ್ಯೂಬ್​ ಲಿಂಕ್​ ಮೇಲ್ ಮಾಡಿದ್ದು, ಅದೀಗ ವೈರಲ್ ಆಗಿದೆ.

ಸೌರಭ್ ಶರ್ಮಾ ಎಂಬ ಸಾಮಾಜಿಕ ಮಾಧ್ಯಮ ಬಳಕೆದಾರರು ದೆಹಲಿ ಮೂಲದ ಬ್ಯುಸಿನೆಸ್ ಸ್ಕೂಲ್ ಎಫ್‌ಎಂಎಸ್ (ಮ್ಯಾನೇಜ್‌ಮೆಂಟ್ ಸ್ಟಡೀಸ್ ಫ್ಯಾಕಲ್ಟಿ) ಡೀನ್ ಕಳುಹಿಸಿದ ಇಮೇಲ್‌ನ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದಾರೆ.

ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ಅವರ ಪತ್ನಿಯ ಹೊಸ ಹಾಡನ್ನು ಪ್ರಚಾರ ಮಾಡಿದ್ದಾರೆ. “ಒನ್ ಮೊಮೆಂಟ್ ಇನ್ ಟೈಮ್” ಎಂಬ ಶೀರ್ಷಿಕೆಯ ಇಮೇಲ್‌ನಲ್ಲಿ ಪತ್ನಿ ಇತ್ತೀಚೆಗೆ ಹಾಡಿದ ಹಾಡಿನ ಲಿಂಕ್ ಇದೆ. ಅದರಲ್ಲಿ ಅವರು ಪತ್ನಿಯನ್ನು ಹೊಗಳಿದ್ದಾರೆ.

ಇದು ಹಲವರ ಟೀಕೆಗೆ ಗುರಿಯಾಗಿದ್ದು, ಕೆಲವರು ಎಂಥ ಪ್ರೀತಿ ಎಂದು ಹೊಗಳಿದ್ದಾರೆ. ಪತ್ನಿಯ ಯೂಟ್ಯೂಬ್​ಗೆ ಹೆಚ್ಚಿನ ಸಬ್​ಸ್ಕ್ರೈಬರ್​ ಆಗಲಿ ಎನ್ನುವ ಉದ್ದೇಶವೇ ವಿನಾ, ಇದರಿಂದ ಮಕ್ಕಳಿಗೆ ಏನು ಮೋಟಿವೇಷನ್​ ಸಿಗುತ್ತದೆ ಎಂದು ಹಲವರು ಟೀಕಿಸಿದ್ದಾರೆ. ಪತ್ನಿಯನ್ನು ಹೊಗಳಿ ಬರೆದಿರುವ ಶಬ್ದಗಳು ಮನೆಯಲ್ಲಿ ಇದ್ದರೆ ಚೆನ್ನ, ಪ್ರೀತಿಯನ್ನು ಸಾರ್ವತ್ರೀಕರಿಸುವುದು ಡೀನ್​ ಒಬ್ಬರಿಗೆ ಎಷ್ಟು ಸರಿ ಎಂದು ಹೇಳುತ್ತಿರುವವರೇ ಹೆಚ್ಚಿನ ಮಂದಿ.

https://twitter.com/randomusements/status/1637472747084210176?ref_src=twsrc%5Etfw%7Ctwcamp%5Etweetembed%7Ctwterm%5E163747274708421

https://twitter.com/tapanwaval/status/1637476227714891782?ref_src=twsrc%5Etfw%7Ctwcamp%5Etweetembed%7Ctwterm%5E1637480721198764032%7Ctwgr%5E9984a021b4e77b0c5acf1fa73150f95aa000edb7%7Ctwcon%5Es2_&ref_url=https%3A%2F%2Fwww.news18.com%2Fbuzz%2Fdelhi-college-dean-emails-wifes-youtube-link-to-students-twitter-says-saccha-pyaar-7335295.html

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read