ನವದೆಹಲಿ: ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರಿಗೆ ವ್ಯಕ್ತಿಯೊಬ್ಬ ಕಪಾಳಮೋಕ್ಷ ಮಾಡಿ ಹಲ್ಲೆ ನಡೆಸಿದ ಪ್ರಕರಣದ ಬೆನ್ನಲ್ಲೇ ಕೇಂದ್ರ ಸರ್ಕಾರ ಅವರಿಗೆ ಝಡ್ ಶ್ರೇಣಿ ಭದ್ರತೆಯನ್ನು ಕಲ್ಪಿಸಿದೆ.
ರೇಖಾ ಗುಪ್ತಾ ಅವರಿಗೆ ಝಡ್ ಶ್ರೇಣಿಯ ವಿಐಪಿ ಭದ್ರತೆ ಒದಗಿಸಲಿಗಿದೆ. ರೇಖಾ ಗುಪ್ತಾ ಹಾಗೂ ಅವರ ಅಧಿಕೃತ ನಿವಾಸಕ್ಕೆ ಅರೆಸೈನಿಕ ಪಡೆಯ ವಿಐಪಿ ಸೆಕ್ಯೂರಿಟಿ ಗ್ರೂಪ್ ನ ಭದ್ರತೆ ಒದಗಿಸಲಾಗಿದೆ. ಕೇಂದ್ರ ಗೃಹ ಸಚಿವಾಲಯದ ಸೂಚನೆ ಮೇರೆಗೆ ಕೇಂದ್ರ ಮೀಸಲು ಪಡೆ ಭದ್ರತೆ ಒದಗಿಸಿದೆ.
ದಿನದ 24 ಗಂಟೆಯೂ 22ರಿಂದ 25 ಶಸ್ತ್ರಸಜ್ಜಿತ ಕಮಾಂಡೋಗಳ ತಂಡವಿ ಸಿಎಂ ರೇಖಾ ಗುಪ್ತಾ ಅವರ ಭದ್ರತೆಯಲ್ಲಿ ನಿರತವಾಗಿರಲಿದೆ.