ಗಾಯಾಳು ಸ್ನೇಹಿತನನ್ನು ಆಸ್ಪತ್ರೆಗೆ ಒಯ್ಯುವ ಬದಲು ಅಂಡರ್ ​ಪಾಸ್​ನಲ್ಲಿ ಎಸೆದ ಬಾಲಕರು…!

ನವದೆಹಲಿ: ದೆಹಲಿಯ ವಿವೇಕ್ ವಿಹಾರ್ ಪ್ರದೇಶದಲ್ಲಿ ಭಯಾನಕ ಘಟನೆ ನಡೆದಿದೆ. ಅಂಡರ್‌ ಪಾಸ್‌ನಲ್ಲಿ ದೆಹಲಿ ಪೊಲೀಸರಿಗೆ ಬಾಲಕನ ಶವ ಸಿಕ್ಕಿದ್ದು, ಇದರ ಆಳಕ್ಕೆ ಹೋದಾಗ ಶಾಕಿಂಗ್​ ಸತ್ಯ ಬಯಲಾಗಿದೆ.

ಮೃತ ಬಾಲಕ ಮೂವರು ಸ್ನೇಹಿತರ ಜೊತೆ ಆಟೋದಲ್ಲಿ ಹೋಗುತ್ತಿದ್ದ. ಆಟೋ ರಿಕ್ಷಾ ಪಲ್ಟಿಯಾದ ನಂತರ ಬಾಲಕನಿಗೆ ಗಾಯಗಳಾಗಿದ್ದವು, ಗಾಯಾಳುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಬದಲು ಅಥವಾ ಪೊಲೀಸರಿಗೆ ವಿಷಯ ತಿಳಿಸುವ ಬದಲು ಸ್ನೇಹಿತರು ಬಾಲಕನ ದೇಹವನ್ನು ಅಂಡರ್​ಪಾಸ್​​ನಲ್ಲಿ ಎಸೆದಿದ್ದಾರೆ.

ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ತನಿಖೆ ನಡೆಯುತ್ತಿದೆ. ಅಪಘಾತದಲ್ಲಿ ಬಾಲಕನಿಗೆ ಗಾಯಗಳಾಗಿತ್ತು. ಅವನ ಸ್ನೇಹಿತರು ಹುಡುಗನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯುವ ಬದಲು, ಅವರು ಅವನ ದೇಹವನ್ನು ಅಂಡರ್‌ಪಾಸ್ ಬಳಿ ಎಸೆದಿದ್ದು, ಬಾಲಕ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read