ಚುಟುಕು ಕ್ರಿಕೆಟ್ ಪ್ರಿಯರ ನೆಚ್ಚಿನ ಐಪಿಎಲ್ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಐಪಿಎಲ್ ಹದಿನಾರನೇ ಆವೃತ್ತಿಯ ಹರಾಜು ಪ್ರಕ್ರಿಯೆ ಈಗಾಗಲೇ ಪೂರ್ಣಗೊಂಡಿದ್ದು, ಮಾರ್ಚ್ 31 ರಿಂದ ಪಂದ್ಯಗಳು ಆರಂಭವಾಗುತ್ತಿವೆ.
ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಐದನೇ ಬಾರಿಗೆ ಐಪಿಎಲ್ ಟ್ರೋಫಿಯನ್ನು ಎತ್ತಿ ಹಿಡಿಯಲು ಸಜ್ಜಾಗಿದ್ದು, ಈ ಬಾರಿಯ ಐಪಿಎಲ್ ಸರಣಿ ಧೋನಿಗೆ ಕಡೆಯ ಪಂದ್ಯಾವಳಿ ಎಂಬ ಕಾರಣಕ್ಕೆ ಮಹತ್ವ ಪಡೆದುಕೊಂಡಿದೆ.
ಧೋನಿ ನೇತೃತ್ವದಲ್ಲಿ ತಂಡದ ಆಟಗಾರರು ಈಗಾಗಲೇ ಚೆನ್ನೈನಲ್ಲಿ ಬೀಡು ಬಿಟ್ಟಿದ್ದು, ಅಭ್ಯಾಸ ಪಂದ್ಯಾವಳಿಗಳನ್ನು ಆಡುತ್ತಿದ್ದಾರೆ. ಇದರ ಮಧ್ಯೆ ಮಹೇಂದ್ರ ಸಿಂಗ್ ಧೋನಿ, ಎಂ.ಎ. ಚಿದಂಬರಂ ಸ್ಟೇಡಿಯಂ ನ ಸೀಟುಗಳಿಗೆ ಬಣ್ಣ ಸ್ಪ್ರೇ ಮಾಡುತ್ತಿರುವ ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸಮವಸ್ತ್ರವಾದ ಹಳದಿ ಬಣ್ಣವನ್ನು ಧೋನಿ ಸೀಟುಗಳಿಗೆ ಸ್ಪ್ರೇ ಮಾಡಿದ್ದು ಬಳಿಕ ನೀಲಿ ಬಣ್ಣವನ್ನು ಕೂಡ ಸ್ಪ್ರೇ ಮಾಡಿದ್ದಾರೆ. ಇದರ ವಿಡಿಯೋವನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅಧಿಕೃತ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಲಾಗಿದೆ.
https://twitter.com/ChennaiIPL/status/1640206958086221825?ref_src=twsrc%5Etfw%7Ctwcamp%5Etweetembed%7Ctwterm%5E1640206958086221825%7Ctwgr%5Ed9dd5a5b0dddb5e8a78eeecae961bff663ad8f6c%7Ctwcon%5Es1_&ref_url=http%3A%2F%2Fm.dailyhunt.in%2Fnews%2Findia%2Fenglish%2Ftimesnownews-epaper-dhf729babb066e4159bc8e6ad4fc8cd3b9%2Fdefinitelylookingyellovemsdhonipaintsseatsatchepaukbeforeipl2023videogoesviralwatch-newsid-n484262114