ಸಂತಾನೋತ್ಪತ್ತಿ ಮೇಲೆ ಪರಿಣಾಮ ಬೀರುತ್ತದೆ ಈ ʼವಿಟಮಿನ್ʼ ಕೊರತೆ

ತಿನ್ನುವ ಆಹಾರ, ಕುಡಿಯುವ ಪಾನೀಯ ನಮ್ಮ ದೇಹದ ಮೇಲೆ ಪರಿಣಾಮ ಬೀರುತ್ತದೆ. ನಮ್ಮ ಜೀವನಶೈಲಿ, ಆಹಾರ ಪದ್ಧತಿ ನಮ್ಮ ಆರೋಗ್ಯ ವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪೋಷಕಾಂಶ, ಜೀವಸತ್ವಗಳು ನಮ್ಮ ದೇಹಕ್ಕೆ ಅಗತ್ಯ. ಅವುಗಳ ಕೊರತೆಯಾದಲ್ಲಿ ರೋಗನಿರೋಧಕ ಶಕ್ತಿ ಕಡಿಮೆಯಾಗುವುದ್ರಿಂದ ಹಿಡಿದು, ಸಂತಾನೋತ್ಪತ್ತಿ, ಚರ್ಮದ ಸಮಸ್ಯೆ ಸೇರಿದಂತೆ ಮಾನಸಿಕ ಸಮಸ್ಯೆ ಕಾಡಲು ಶುರುವಾಗುತ್ತದೆ. ನಿರ್ದಿಷ್ಟ ವಿಟಮಿನ್ ಕೊರತೆಯಿಂದ ಪುರುಷರು ಮತ್ತು ಮಹಿಳೆಯರ ಸಂತಾನೋತ್ಪತ್ತಿ ಮೇಲೆ ಪರಿಣಾಮ ಬೀರುತ್ತದೆ.

ವಿಟಮಿನ್ ಡಿ ಅನೇಕ ಆಹಾರಗಳಲ್ಲಿ ಕಂಡು ಬರುತ್ತದೆಯಾದರೂ, ಇದರ ಕೊರತೆಯು ಪುರುಷರು ಮತ್ತು ಮಹಿಳೆಯರ ಸಂತಾನೋತ್ಪತ್ತಿ ಮೇಲಾಗುತ್ತದೆ. ವಿಟಮಿನ್ ಡಿ ಕೊರತೆಯು ಸೋಂಕುಗಳು, ಗರ್ಭಾವಸ್ಥೆಯಲ್ಲಿನ ತೊಂದರೆಗಳು, ಮೂಳೆ ಮುರಿತಗಳು ಮತ್ತು ಚರ್ಮದ ತೊಂದರೆಗಳಿಗೆ ಕಾರಣವಾಗಬಹುದು.

ವಿಟಮಿನ್ ಡಿ ಕಡಿಮೆಯಾದಲ್ಲಿ ವಿಪರೀತ ಸುಸ್ತಾಗುತ್ತದೆ. ಮೂಳೆಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ವಿವಿಧ ಭಾಗಗಳ ಸ್ನಾಯುಗಳಲ್ಲಿ ನಿರಂತರ ನೋವು ಕಾಡುತ್ತದೆ. ಒತ್ತಡ ಕಾಣಿಸಿಕೊಳ್ಳುತ್ತದೆ. ಮಹಿಳೆಯರಲ್ಲಿ ವಿಟಮಿನ್ ಡಿ ಕೊರತೆಯಿಂದಾಗಿ ಖಿನ್ನತೆ ಅಥವಾ ಒತ್ತಡದ ಸಮಸ್ಯೆ ಹೆಚ್ಚು.

ಗಂಡು ಮತ್ತು ಹೆಣ್ಣು ಇಬ್ಬರಲ್ಲೂ ಸಂತಾನೋತ್ಪತ್ತಿ ಮೇಲೆ ಪರಿಣಾಮ ಬೀರುತ್ತದೆ. ಕೂದಲು ಉದುರುವುದು ಮತ್ತು ವಯಸ್ಸಿನ ಮೊದಲು ಕೂದಲು ಬಿಳಿಯಾಗುವ ಸಮಸ್ಯೆ ಹೆಚ್ಚಾಗುತ್ತದೆ. ಗಾಯಗಳು ಗುಣವಾಗಲು ಬಹಳ ಸಮಯ ತೆಗೆದುಕೊಳ್ಳುತ್ತದೆ.

ಸೂರ್ಯನ ಕಿರಣಗಳಿಂದ ನೇರವಾಗಿ ವಿಟಮಿನ್ ಡಿ ತೆಗೆದುಕೊಳ್ಳಬಹುದು. ಇದರೊಂದಿಗೆ ವಿಟಮಿನ್ ಡಿ ಇರುವ ಆಹಾರವನ್ನು ಸೇವಿಸಬೇಕು. ಮೊಟ್ಟೆಯ ಬಿಳಿಭಾಗ, ಸೋಯಾ ಹಾಲು, ಹಾಲು, ಮೊಸರು, ಅಣಬೆಗಳು, ಧಾನ್ಯಗಳು, ಚೀಸ್, ಕಿತ್ತಳೆ ರಸ ವಿಟಮಿನ್ ಡಿ ಹೆಚ್ಚಿಸುತ್ತದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read