BREAKING : ದೀಪಾವಳಿಗೆ ‘BBMP’ ಯಿಂದ ಹೊಸ ಮಾರ್ಗಸೂಚಿ ಬಿಡುಗಡೆ : ಈ ನಿಯಮಗಳ ಪಾಲನೆ ಕಡ್ಡಾಯ

ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ಪಟಾಕಿ ಮಾರಾಟಕ್ಕೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದು, ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.

ಧಾರ್ಮಿಕ ಮೈದಾನಗಳು, ಶಾಲಾ-ಕಾಲೇಜು ಮೈದಾನಗಳು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಿಯಂತ್ರಣಕ್ಕೆ ಒಳಪಡುವ ಕಾರ್ಖಾನೆ, ರಕ್ಷಣಾ ಇಲಾಖೆ ಮೈದಾನಗಳು ಸೇರಿದಂತೆ ಖಾಸಗಿ ಮೈದಾನಗಳಲ್ಲಿಯೂ ಪಟಾಕಿ ಮಾರಾಟವನ್ನು ನಿಷೇಧಿಸಲಾಗಿದೆ.

ಬಿಬಿಎಂಪಿ ಗುರುತು ಮಾಡಿದ ಸ್ಥಳಗಳಲ್ಲಿ ಮಾತ್ರ ಪಟಾಕಿ ಮಾರಾಟ ಮಾಡಬಹುದು. ಒಂದು ವಲಯದ 2-3 ಮೈದಾನಗಳಲ್ಲಿ ಮಾತ್ರ ಹಾಗೂ ಒಂದು ಮೈದಾನದಲ್ಲಿ 10 ಪಟಾಕಿ ಮಳಿಗೆಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಪ್ರತಿ ಮಳಿಗೆಯಲ್ಲಿ ಬೆಂಕಿ ನಂದಿಸುವ ಉಪಕರಣ ಕಡ್ಡಾಯವಾಗಿದೆ.

ಪಾಲಿಕೆವತಿಯಿಂದ 70 ಮೈದಾನಗಳಲ್ಲಿ 426 ಮಳಿಗೆಗಳಿಗೆ ಅನುಮತಿ ನೀಡಲಾಗಿದೆ. ಆಯಾ ವಲಯ ಆಯುಕ್ತರು ಹಾಗೂ ಜಂಟಿ ಆಯುಕ್ತರಿಂದ ಸುರಕ್ಷತೆ ಪರಿಶೀಲನೆ ನಡೆಸಿ ಮಳಿಗೆ ಸ್ಥಾಪನೆಗೆ ಅವಕಾಶ ನೀಡಲಾಗುವುದು.

ಬೆಂಗಳೂರು ದಕ್ಷಿಣ ವಲಯದ 9 ಮೈದಾನಗಳಲ್ಲಿ 87 ಮಳಿಗೆ, ಮಹದೇವಪುರ ವಲಯದ 13 ಮೈದಾನಗಳಲ್ಲಿ 50 ಮಳಿಗೆ, ಬೊಮ್ಮನಹಳ್ಳಿ ವಲಯದ 3 ಮೈದಾನಗಳಲ್ಲಿ 6 ಮಳಿಗೆ, ಪಶ್ಚಿಮ ವಲಯದ 4 ಮೈದಾನಗಳಲ್ಲಿ 63 ಮಳಿಗೆ, ಪೂರ್ವ ವಲಯದಲ್ಲಿ 23 ಮೈದಾನಗಳಲ್ಲಿ 101 ಮಳಿಗೆ, ದಾಸರಹಳ್ಳಿ ವಲಯದ 2 ಮೈದಾನಗಳಲ್ಲಿ 18 ಮಳಿಗೆ, ಆರ್.ಆರ್.ನಗರ ವಲಯದಲ್ಲಿ 5 ಮೈದಾನಗಳನ್ನು ಗುರುತಿಸಿ 62 ಮಳಿಗೆಗೆ ತಾತ್ಕಾಲಿಕ ಅನುಮತಿ ನೀಡಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read