ಬೆಂಗಳೂರು : ನೀವು ರಕ್ಷಿತ್ ಶೆಟ್ಟಿ , ಸಂಯಕ್ತಾ ಹೆಗಡೆ, ರಶ್ಮಿಕಾ ಮಂದಣ್ಣ ಅಭಿನಯದ ಕಿರಿಕ್ ಪಾರ್ಟಿ ಸಿನಿಮಾ ನೋಡಿರಬಹುದು. ಅದರಲ್ಲಿ ಸಾನ್ವಿ ಪಾತ್ರಧಾರಿ ಹೇಗೆ ಸಾವನ್ನಪ್ಪುತ್ತಾರೋ ಅದೇ ರೀತಿ ಬೆಂಗಳೂರಿನಲ್ಲಿ ಯುವತಿಯೋರ್ವಳು ಮೃತಪಟ್ಟಿದ್ದಾಳೆ.
ಹೌದು, ಬೆಂಗಳೂರಲ್ಲಿ ಕಿರಿಕ್ ಪಾರ್ಟಿ ಸಿನಿಮಾದ ‘ಸಾನ್ವಿ’ ಸ್ಟ್ರೈಲಲ್ಲಿ ಡೆತ್ ಆಗಿದ್ದು, ನಿರ್ಮಾಣ ಹಂತದ ಕಟ್ಟಡದ 13ನೇ ಮಹಡಿಯಿಂದ ಬಿದ್ದು ಯುವತಿಯೊಬ್ಬಳು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಚೂಡಸಂದ್ರದಲ್ಲಿ ನಡೆದಿದೆ.
ಸ್ನೇಹಿತರ ಜೊತೆ ಕಟ್ಟಡ ಏರಿದ್ದ ಯುವತಿ ಕೆಳಗೆ ಬಿದ್ದು ಮೃತಪಟ್ಟಿದ್ದಾರೆ . ಸ್ನೇಹಿತರ ಜೊತೆ ನಿರ್ಮಾಣ ಹಂತದ ಕಟ್ಟಡದ ಮೇಲೆ ಯುವತಿ ಮದ್ಯಪಾನ ಮಾಡಲು ತೆರಳಿದ್ದಳು. ನಿರ್ಮಾಣ ಹಂತದ ಕಟ್ಟಡದಲ್ಲಿ ತನ್ನ ಸ್ನೇಹಿತರ ಜೊತೆಗೂಡಿ ಮದ್ಯಪಾನ ಮಾಡಲು ಮುಂದಾಗಿದ್ದಳು. ಈ ವೇಳೆ ಸ್ನೇಹಿತರ ಜೊತೆ ನಂದಿನಿ ಕುಡಿದು ರೀಲ್ಸ್ ಮಾಡಿದ್ದಾಳೆ. ನಂತರ ಆಯತಪ್ಪಿ ಕಟ್ಟಡದಿಂದ ಬಿದ್ದು ಮೃತಪಟ್ಟಿದ್ದಾಳೆ ಎನ್ನಲಾಗಿದೆ. ಮೃತಳನ್ನು ಆಂಧ್ರಪ್ರದೇಶ ಮೂಲದ ನಂದಿನಿ (23) ಎಂದು ಗುರುತಿಸಲಾಗಿದೆ.
ನಿನ್ನೆ ಸಂಜೆ ಸ್ನೇಹಿತರ ಜೊತೆ ಕಟ್ಟಡದ ಮೇಲೆ ಹೋಗಿದ್ದಳು. ಈ ವೇಳೆ ದುರಂತ ಸಂಭವಿಸಿದೆ. ಪರಪ್ಪನ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.