ಚಿತ್ರದುರ್ಗ ರೇಣುಕಾಸ್ವಾಮಿ ಬರ್ಬರ ಹತ್ಯೆ ಪ್ರಕರಣದ ಎ2 ಆರೋಪಿ ದರ್ಶನ್ ಮತ್ತೆ ಜೈಲು ಪಾಲಾದ ಹಿನ್ನೆಲೆಯಲ್ಲಿ ಶಾಂತಿ ಕಾಪಾಡಿಕೊಳ್ಳುವಂತೆ ಅಭಿಮಾನಿಗಳಿಗೆ ಮನವಿ ಮಾಡಲಾಗಿದೆ. ಡಿ ಕಂಪನಿಯ ಪೇಜ್ ನಲ್ಲಿ ದರ್ಶನ್ ಅಭಿಮಾನಿಗಳಿಗೆ ಈ ಕುರಿತಾಗಿ ಮನವಿ ಮಾಡಲಾಗಿದ್ದು, ನ್ಯಾಯ ಸದಾ ನಂಬಿದವರನ್ನು ಕಾಪಾಡುತ್ತದೆ. ಶಾಂತವಾಗಿರಿ. ನಮ್ಮೆಲ್ಲರ ಡಿ ಬಾಸ್ ಬೇಗ ಬಂದು ಸೇರಲಿ ಎಂದು ಪೋಸ್ಟ್ ಹಾಕಲಾಗಿದೆ.
“ಪ್ರಿಯ ಅಭಿಮಾನಿಗಳೇ, ದಯಮಾಡಿ ಶಾಂತಿಯನ್ನು ಕಾಪಾಡಿಕೊಳ್ಳಬೇಕಾಗಿ ವಿನಂತಿ. ನ್ಯಾಯ ಸದಾ ನಂಬಿದವರನ್ನು ಕಾಯುತ್ತದೆ. ನಮ್ಮೆಲ್ಲರ ಡಿ ಬಾಸ್ ಶೀಘ್ರದಲ್ಲೇ ನಮ್ಮ ಬಳಿ ಬಂದು ಸೇರಲಿ ಎಂದು ಆಶಿಸೋಣ. ನಿಮ್ಮ ವಿಶ್ವಾಸ ಮತ್ತು ಪ್ರೀತಿಯ ನೆರವಿನಿಂದ, ಈ ಸಮಯವನ್ನು ಧೈರ್ಯದಿಂದ ಎದುರಿಸಬಹುದು” ಎಂದು ಹೇಳಲಾಗಿದೆ.