ನರೇಗಾ ಕಾರ್ಮಿಕರಿಗೆ ಮುಖ್ಯ ಮಾಹಿತಿ: ಆಧಾರ್ ಜೋಡಣೆಗೆ ಕೊನೆ ಅವಕಾಶ

ನವದೆಹಲಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿ ಕಾರ್ಮಿಕರಿಗೆ ಆಧಾರ್ ಆಧಾರಿತ ಪಾವತಿ ವ್ಯವಸ್ಥೆ ಅಳವಡಿಕೆಗೆ ನೀಡಿದ್ದ ಗಡುವು ಆಗಸ್ಟ್ 31ಕ್ಕೆ ಮುಕ್ತಾಯವಾಗಲಿದೆ.

ಆಧಾರ್ ಆಧರಿತ ಪಾವತಿ ವ್ಯವಸ್ಥೆಗಾಗಿ ನೀಡಿದ್ದ ಗಡುವನ್ನು ಮೂರು ಬಾರಿ ವಿಸ್ತರಿಸಿದ್ದು, ಆಗಸ್ಟ್ 31 ಕೊನೆಯ ಅವಕಾಶವಾಗಿದೆ. ಮತ್ತೆ ಗಡುವು ವಿಸ್ತರಣೆ ಮಾಡುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

2024ರ ಜನವರಿಯಲ್ಲಿ ನರೇಗಾ ಯೋಜನೆ ಅಡಿ ದಾಖಲಾದವರಿಗೆ ಕೂಲಿ ಪಾವತಿಸಲು ಆಧಾರ್ ಆಧಾರಿತ ಪಾವತಿ ವ್ಯವಸ್ಥೆಯನ್ನು ಕಡ್ಡಾಯ ಮಾಡಲಾಗಿದೆ. ಈ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಫೆಬ್ರವರಿ 1ರವರೆಗೆ ಗಡುವು ನೀಡಿದ್ದು, ನಂತರ ಮಾರ್ಚ್ 31, ಬಳಿಕ ಜೂನ್ 30ರವರೆಗೆ ಗಡುವು ನೀಡಲಾಗಿತ್ತು. ಕೊನೆಯದಾಗಿ ಆಗಸ್ಟ್ 31ರವರೆಗೆ ಗಡುಗು ವಿಸ್ತರಿಸಿದ್ದು, ಮತ್ತೆ ಯಾವ ಕಾರಣಕ್ಕೂ ವಿಸ್ತರಿಸುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಇದುವರೆಗೆ ಶೇಕಡ 90ರಷ್ಟು ಸಕ್ರಿಯ ಕಾರ್ಮಿಕರ ಖಾತೆ ಆಧಾರ್ ಶೋಡಣೆಯಾಗಿದ್ದು, ಕಾಲಮಿತಿಯನ್ನು ಮತ್ತೆ ವಿಸ್ತರಿಸುವುದಿಲ್ಲ ಎಂದು ಹೇಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read