ಬೆಂಗಳೂರು : ಡಿಕೆ ಶಿವಕುಮಾರ್ ನೀರಿನ ಕಳ್ಳ ಎಂಬ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿಕೆಗೆ ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ನನ್ನ ಬಗ್ಗೆ ಸುದ್ದಿಗೆ ಬಂದವರ, ನನ್ನ ವಿಚಾರಕ್ಕೆ ಬಂದವರ ಸೆಟ್ಲಮೆಂಟ್ ಆಗಿದೆ. ಕೆಲವರಿಗೆ ಒಬ್ಬೊಬ್ಬರಿಗೆ ಸೆಟ್ಲಮೆಂಟ್ ಆಗಿದೆ ಎಂದು ಡಿಕೆಶಿ ಖಡಕ್ ತಿರುಗೇಟು ನೀಡಿದರು.
ಅಸೆಂಬ್ಲಿಯಲ್ಲಿ ನನ್ನ ಅಪ್ಪನ ಮೀಟ್ ಮಾಡ್ತಿನಿ ಅಂದಿದ್ದರು. ಈಗ ಎಲ್ಲಿದ್ದಾರೆ, ರೆಸ್ಟ್ ಮಾಡ್ಲಿ ಎಂದು ಈಶ್ವರಪ್ಪ ಹೇಳಿಕೆಗೆ ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು ನೀಡಿದ್ದಾರೆ.ಡಿಸಿಎಂ ಡಿಕೆ ಶಿವಕುಮಾರ್ ನೀರಿನ ಕಳ್ಳ. ರೈತರನ್ನು ದ್ರೋಹ ಮಾಡಿದ ಡಿಸಿಎಂ ಅಯೋಗ್ಯ ಎಂದು ಎಂಬ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದ್ದರು. ಸಿಎಂ ಕ್ಷೇತ್ರದಲ್ಲಿ ಲಂಚ ಕೊಟ್ಟು, ಆಮಿಷ ತೋರಿಸಿ ಗೆದ್ದಿದ್ದಾರೆ. ಚುನಾವಣಾ ಆಯೋಗ ಇದನ್ನು ಪರಿಗಣಿಸಬೇಕು ಎಂದು ಈಶ್ವರಪ್ಪ ಆಗ್ರಹಿಸಿದರು.
You Might Also Like
TAGGED:dcm dks