ರಾಮನಗರ : ಜನವರಿ 6 ರಂದು ಡಿಸಿಎಂ ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ ಎಂದು ಶಾಸಕ ಇಕ್ಬಾಲ್ ಹುಸೇನ್ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ರಾಮನಗರದಲ್ಲಿ ಮಾತನಾಡಿದ ಅವರು ‘ ಡಿಸಿಎಂ ಡಿಕೆ ಶಿವಕುಮಾರ್ ಸಿಎಂ ಆಗೋದು ಖಚಿತ. ಜನವರಿ 6 ರಂದು ಡಿಸಿಎಂ ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ. ಡಿಕೆಶಿಯನ್ನ ಸಿಎಂ ಮಾಡೋದೇ ನಮ್ಮ ಗುರಿ’ ಎಂದು ಇಕ್ಬಾಲ್ ಹುಸೇನ್ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಡಿಕೆಶಿ ಅವರಿಗೆ ಮುಖ್ಯಮಂತ್ರಿ ಸ್ಥಾನವನ್ನ ಬಿಟ್ಟುಕೊಡಬೇಕು. ಡಿಕೆಶಿ ಸಿಎಂ ಆಗೋದು ಖಚಿತ. ಪ್ರಾಯಶಿತ ಜ.6 ರಂದು ಅವರು ಸಿಎಂ ಪಟ್ಟಕ್ಕೇರಲಿದ್ದಾರೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.ಬೆಳಗಾವಿ ಅಧಿವೇಶನ ಆದ ಮೇಲೆ ಡಿಕೆಶಿ ಸಿಎಂ ಆಗ್ತಾರೆ. ಜನವರಿ 6 ಅಥವಾ 9 ರಂದು ಡಿಕೆಶಿ ಸಿಎಂ ಆಗೋದು ಖಚಿತ ಎಂದಿದ್ದಾರೆ.
