ಬೆಂಗಳೂರು : ಫುಟ್ ಬಾತ್ ನಲ್ಲಿ ಕಸ ಹಾಕಿದ್ರೆ ಠಾಣಾ ವ್ಯಾಪ್ತಿಯಲ್ಲಿ ಕ್ರಮ ಕೈಗೊಳ್ಳುವುದಾಗಿ ಡಿಸಿಎಂ ಡಿಕೆ ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.
ಡಿಸಿಎಂ ಡಿಕೆ ಶಿವಕುಮಾರ್ ಇಂದು ಬೆಂಗಳೂರು ನಗರ ಪ್ರದಕ್ಷಿಣೆ ಹಾಕಿದ್ದು, ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ನಾವು ರೆವೆನ್ಯೂ ಜನರೇಟ್ ಮಾಡುತ್ತೇವೆ. ಟ್ಯಾಕ್ಸ್ ಕದಿಯುತ್ತಿರುವವರಿಗೆ ಕಡಿವಾಣ ಹಾಕುವ ಮೂಲಕ ಬೆಂಗಳೂರು ಅಭಿವೃದ್ಧಿ ಮಾಡುತ್ತೇವೆ ಎಂದರು. ವಿಲೇವಾರಿ ಟೆಂಡರ್ ಪಡೆದವರು ಎಲ್ಲಿ ಬೇಕಾದಲ್ಲಿ ಅಲ್ಲಿ ಕಸ ಡಂಪ್ ಮಾಡುತ್ತಿದ್ದಾರೆ. ಲಾರಿ, ಟ್ರ್ಯಾಕ್ಟರ್ಗಳ ಚಾಲಕರು ಕಸ ತಂದು ಸುರಿಯುತ್ತಿದ್ದಾರೆ. ಲಾರಿ ಚಾಲಕರು ರೋಡ್, ಫುಟ್ಪಾತ್ ಮೇಲೆ ಕಸ ಹಾಕಿದ್ರೆ ಚಾಲಕರ ವಿರುದ್ಧ ಠಾಣಾ ವ್ಯಾಪ್ತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ತ್ಯಾಜ್ಯ ಸಂಸ್ಕರಣಾ ಕೇಂದ್ರಕ್ಕೆ ಭೇಟಿ ಮಾಡಿದ್ದೀನಿ. ಇಲ್ಲಿ ಅಧಿಕಾರಿಗಳು ಸರಿಯಾಗಿ ಪರಿಶೀಲನೆ ಮಾಡ್ತಿಲ್ಲ. ಅದನ್ನ ಕಮಿಷನರ್ಗೆ ತೋರಿಸಿದ್ದೇನೆ ಎಂದರು.
ಇಷ್ಟು ದಿನ ಇಂದಿರಾ ಕ್ಯಾಂಟೀನ್ ಅವ್ಯವಹಾರವನ್ನು ಕಿವಿಯಲ್ಲಿ ಕೇಳಿದ್ದೆ, ಈಗ ಕಣ್ಣಾರೆ ಕಂಡೆ. ಇದಕ್ಕೆಲ್ಲಾ ಒಂದು ಫುಲ್ ಸ್ಟಾಪ್ ಇಡುತ್ತೇನೆ ಎಂದರು. ಇಂದಿರಾ ಕ್ಯಾಂಟಿನ್ಗೆ ಹೋಗಿದ್ದೆ, ಅಲ್ಲಿ ಆಹಾರ ಖಾಲಿ ಆಗಿತ್ತು, ಕೆಲವು ಕಡೆ ಐದು ರೂಪಾಯಿಗೆ ಹತ್ತು ರೂಪಾಯಿ ಕಲೆಕ್ಟ್ ಮಾಡುತ್ತಿದ್ದಾರೆ. ಬಹಳ ವರ್ಷದಿಂದ ಹೀಗೆ ನಡೆಯುತ್ತಿದೆ. ಎಲ್ಲವನ್ನೂ ರಿಪೇರಿ ಮಾಡ್ತೀನಿ ಎಂದರು.
ಇಂದಿರಾ ಕ್ಯಾಂಟೀನ್ ನಲ್ಲಿ ತಿಂಡಿ ಸೇವಿಸಿ ಡಿಸಿಎಂ
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಇಂದು ಬೆಳ್ಳಂಬೆಳಗ್ಗೆ ಇಂದಿರಾ ಕ್ಯಾಂಟೀನ್ ಗೆ ಭೇಟಿ ನೀಡಿ ಸಾರ್ಜನಿಕರ ಜೊತೆಗೆ ಉಪಹಾರ ಸೇವಿಸಿದ್ದಾರೆ. ಬೆಂಗಳೂರಿನ ದಾಸರಹಳ್ಳಿಯಲ್ಲಿರುವ ಇಂದಿರಾ ಕ್ಯಾಂಟೀನ್ ಗೆ ತೆರಳಿದ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಇಂದಿರಾ ಕ್ಯಾಂಟೀನ್ ನಲ್ಲಿ ಸಾರ್ವಜನಿಕರ ಜೊತೆಗೆ ಕೂತು ಉಪಹಾರ ಸೇವಿಸಿದ್ದಾರೆ.
ಡಿ.ಕೆ.ಶಿವಕುಮಾರ್ ಅವರು ಮೊದಲು ಬೆಳಗ್ಗೆ ಬೆಂಗಳೂರಿನ ಚೊಕ್ಕಸಂದ್ರದ ಇಂದಿರಾ ಕ್ಯಾಂಟೀನ್ ಗೆ ಹೋಗಿದ್ದರು. ಅಲ್ಲಿ ತಿಂಡಿ ಖಾಲಿಯಾದ ಹಿನ್ನೆಲೆಯಲ್ಲಿ ದಾಸರಹಳ್ಳಿರುವ ಇಂದಿರಾ ಕ್ಯಾಂಟೀನ್ ಗೆ ಭೇಟಿ ನೀಡಿದ್ದು, ಅಲ್ಲಿ ಸಾರ್ವಜನಿಕರ ಜೊತೆಗೆ ಕೂತು ಕೇಸರಿಬಾತ್, ಉಪ್ಪಿಟ್ಟು ಸೇವನೆ ಮಾಡಿದ್ದಾರೆ.