ಕಲಬುರಗಿ : ಕಲಬುರಗಿಯಲ್ಲಿ ಹಾಡಹಗಲೇ ದರೋಡೆ ನಡೆದಿದ್ದು, ಆಭರಣದ ಅಂಗಡಿಗೆ ನುಗ್ಗಿದ ಖದೀಮರು 3 ಕೆಜಿ ಚಿನ್ನಾಭರಣ ಲೂಟಿ ಮಾಡಿದ್ದಾರೆ.
ಸಿನಿಮಾ ಸ್ಟೈಲಲ್ಲಿ ಗನ್ ಹಿಡಿದು ಆಭರಣದ ಅಂಗಡಿಗೆ ನುಗ್ಗಿದ ಕಳ್ಳರು ಬರೋಬ್ಬರಿ 3 ಕೆಜಿ ಚಿನ್ನಾಭರಣ ದೋಚಿಕೊಂಡು ಪರಾರಿ ಆಗಿದ್ದಾರೆ.
ನಗರದ ಸರಾಫ್ ಬಜಾರ್ ನಲ್ಲಿ ಹಾಡಹಗಲೇ ರಾಬರಿ ನಡೆದಿದೆ. ಮಾಸ್ಕ್ ಧರಿಸಿಕೊಂಡು ಗನ್ ಹಿಡಿದು ಏಕಾಏಕಿ ಅಂಗಡಿಗೆ ನುಗ್ಗಿದ ನಾಲ್ವರನ್ನೊಳಗೊಂಡ ಗ್ಯಾಂಗ್ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ ಮಾಡಿ ಎಸ್ಕೇಪ್ ಆಗಿದೆ. ಘಟನೆ ನಡೆದ ಸ್ಥಳಕ್ಕೆ ಕಲಬುರಗಿ ಪೊಲೀಸ್ ಅಧಿಕಾರಿಗಳು ಧಾವಿಸಿ ಪರಿಶೀಲನೆ ನಡೆಸಿದ್ದಾರೆ.
You Might Also Like
TAGGED:ದರೋಡೆ