ಒಂದೇ ದಿನ ಗ್ರಾಮದಲ್ಲಿ 7 ಜನ ಸಾವು: ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ

ದಾವಣಗೆರೆ: ದಾವಣಗೆರೆ ಹೊರವಲಯದ ಹೊಸ ಕುಂದವಾಡ ಗ್ರಾಮದಲ್ಲಿ ಒಂದೇ ದಿನ 7 ಜನ ಮೃತಪಟ್ಟಿದ್ದು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

ಮೂರು ದಿನದ ನವಜಾತ ಶಿಶು ಸೇರಿ 65 ವರ್ಷದ ವೃದ್ಧೆಯವರೆಗೆ ಒಂದೇ ದಿನ 7 ಜನ ಗ್ರಾಮದಲ್ಲಿ ಮೃತಪಟ್ಟಿದ್ದಾರೆ. ಕುಂದವಾಡ ಗ್ರಾಮದ ಶಾಂತಮ್ಮ(65), ಮಾರಜ್ಜಿ(60) ವಯೋ ಸಹಜವಾಗಿ ಮೃತಪಟ್ಟಿದ್ದಾರೆ. ಭೀಮಪ್ಪ(60) ಸಂತೋಷ್(32) ವಾಂತಿ ಭೇದಿಯಿಂದ ಸಾವನ್ನಪ್ಪಿದ್ದಾರೆ.

ಈರಮ್ಮ(65), ಸುನಿಲ್(25) ಜ್ವರದಿಂದ ಮತ್ತು ಮೂರು ತಿಂಗಳ ಹಿಂದೆ ಜನಿಸಿದ ನವಜಾತ ಗಂಡ ಶಿಶು ಉಸಿರಾಟ ಸಮಸ್ಯೆಯಿಂದ ಸಾವನ್ನಪ್ಪಿದ್ದಾರೆ. ಒಂದೇ ದಿನ ಒಂದೇ ಗ್ರಾಮದಲ್ಲಿ 7 ಜನಮೃತಪಟ್ಟಿದ್ದು ಗ್ರಾಮಸ್ಥರಲ್ಲಿ ಆತಂಕಕ್ಕೆ ಕಾರಣವಾಗಿದೆ. ಊರಿನಲ್ಲಿ ಸ್ಮಶಾನ ಜಾಗ ಕಲ್ಪಿಸುವಂತೆ ಹೋರಾಟ ನಡೆಸಿ ಮನವಿ ಮಾಡಿದ್ದರೂ ಅಧಿಕಾರಿಗಳು ಸ್ಪಂದಿಸಿಲ್ಲ. ಒಂದೇ ದಿನ 7 ಜನ ಮೃತಪಟ್ಟಿದ್ದು ಅಂತ್ಯಕ್ರಿಯೆಗೆ ಜಾಗವಿಲ್ಲದಂತಾಗಿದೆ ಎಂದು ಗ್ರಾಮಸ್ಥರು ಪ್ರತಿಭಟನೆ ಕೂಡ ನಡೆಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read