ದಾವಣಗೆರೆ: ದಾವಣಗೆರೆಯ ಮಟ್ಟಿಕಲ್ಲ ಬಳಿ ಗಣೇಶೋತ್ಸವ ವೇಳೆ ಆಕ್ಷೇಪಾರ್ಹ ಫ್ಲೆಕ್ಸ್ ಅಳವಡಿಸಿದ್ದ ಪ್ರಕರಣಕ್ಕೆಸಂಬಂಧಿಸಿದಂತೆ ಪಿಎಸ್ ಐ ಹಗೂ ಇಬ್ಬರು ಕಾನ್ಸ್ ಟೇಬಲ್ ಗಳನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಲಾಗಿದೆ.
ಶಿವಾಜಿ ಹಾಗೂ ಅಫ್ಜಲ್ ಖಾನ್ ನಡುವಿನ ಯುದ್ಧದ ಸನ್ನಿವೇಶವುಳ್ಳ ಫ್ಲೆಕ್ಸ್ ನ್ನು ವೀರ ಸಾವರ್ಕರ್ ಯುವಕರ ಸಂಘದವರು ಅಳವಡಿಸಿದ್ದರು. ಇದನು ತೆರವಿಗೆ ಮುಂದಾಗಿದ್ದ ವೇಳೆ ಗಲಾಟೆ ನಡೆದಿತ್ತು. ಇದೀಗ ಕೋಮು ಭಾವನೆಗೆ ಧಕ್ಕೆ ತರುವ ರೀತಿಯಲ್ಲಿ ಫ್ಲೆಕ್ಸ್ ಅಳವಡಿಕೆ ಮಾಡಿದ್ದರೂ, ಆಕ್ಷೇಪಾರ್ಹ ಫ್ಲೆಕ್ಸ್ ಅಳವಡಿಕೆ ಬಗ್ಗೆ ಮಾಹಿತಿ ನೀಡದ ಆರೋಪದಲ್ಲಿ ಕರ್ತವ್ಯಲೋಪ ಹಿನ್ನೆಲೆಯಲ್ಲಿ ಮೂವರು ಪೊಲೀಸ್ ಸಿಬ್ಬಂದಿಗಳನ್ನು ಅಮಾನತು ಮಾಡಿ ದಾವಣಗೆರೆ ಎಸ್ ಪಿ ಆದೇಶ ಹೊರಡಿಸಿದ್ದಾರೆ.
ದಾವಣಗೆರೆ ಆರ್ ಎಂ ಸಿ ಯಾರ್ಡ್ ಪಿಎಸ್ ಐಸಚಿನ್ ಬಿರಾದಾರ್, ಇಬ್ಬರು ಕಾನ್ಸ್ ಟೇಬಲ್ ಗಳಾದ ಷಣ್ಮುಕ, ವತ್ಸಲಾ ಅಮಾನತುಗೊಂಡವರು.