BIG NEWS: ಗಣೇಶೋತ್ಸವ ವೇಳೆ ಶಿವಾಜಿ ಬ್ಯಾನರ್ ತೆರವು ವೇಳೆ ಗಲಾಟೆ: ಪರಿಸ್ಥಿತಿ ಉದ್ವಿಗ್ನ

ದಾವಣಗೆರೆ: ಗಣೇಶೋತ್ಸವ ಹಿನ್ನೆಲೆಯಲ್ಲಿ ಶಿವಾಜಿ ಬ್ಯಾನರ್ ತೆರವಿಗೆ ಪೊಲೀಸರು ಮುಂದಾಗುತ್ತಿದಂತೆ ಗಲಾಟೆ ನಡೆದಿರ್ಯ್ವ ಘಟನೆ ದಾವಣಗೆರೆಯಲ್ಲಿ ನಡೆದಿದೆ.

ದಾವಣಗೆರೆ ಜಿಲ್ಲೆಯ ಮಟಕಲ್ಲು ಪ್ರದೇಶದಲ್ಲಿ ಗಣೇಶೋತ್ಸವ ಆಚರಣೆ ಹಿನ್ನೆಲೆಯಲ್ಲಿ ಛತ್ರಪತಿ ಶಿವಾಜಿ ಬ್ಯಾನರ್ ಗಳನ್ನು ತೆರವು ಮಾಡಲು ಪೊಲೀಸರು ಮುಂದಾಗಿದ್ದರು. ಶಿವಾಜಿ ಅಫ್ಜಲ್ ಖಾನ್ ನನ್ನು ಕೊಲ್ಲುವ ಫ್ಲೆಕ್ಸ್ ಅವಳವಡಿಸಲಾಗಿತ್ತು. ಇದು ಕೋಮು ಪ್ರಚೋದನೆಗೆ ಕಾರಣವಾಗುತ್ತದೆ ಎಂದು ಪೊಲೀಸರು ಫ್ಲೆಕ್ಸ್ ತೆರವು ಮಾಡಲು ಮುಂದಾಗಿದ್ದಾರೆ. ಇದಕ್ಕೆ ಹಿಂದೂ ಯುವಕರ ಗುಂಪು ವಿರೋಧ ವ್ಯಕ್ತಪಡಿಸಿದೆ.

ಯಾವುದೇ ಕಾರಣಕ್ಕೂ ಬ್ಯಾನರ್ ತೆರವು ಮಾಡುವಂತಿಲ್ಲ. ಯುವಕರಿಗೆ ಇತಿಹಾಸ ತಿಳಿಸುವ ಕೆಲಸವನ್ನು ಪ್ರತಿ ವರ್ಷ ಮಾಡುತ್ತಿದ್ದೇವೆ ಎಂದು ಯುವಕರ ಗುಂಪು ಸಮಜಾಯಿಷಿ ನೀಡಿದೆ. ಆದಾಗ್ಯೂ ಪೊಲೀಸರು ಬ್ಯಾನರ್ ತೆರವಿಗೆ ಮುಂದಾಗುತ್ತಿದ್ದಂತೆ ಹಿಂದೂ ಕಾರ್ಯಕರ್ತರು ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾರೆ. ಯಾವ ಕಾರಣಕ್ಕೂ ಶಿವಾಜಿ ಫ್ಲೆಕ್ಸ್ ತೆರವಿಗೆ ಬಿಡಲ್ಲ ಎಂದು ಪಟ್ತು ಹಿಡಿದಿದ್ದಾರೆ. ಈ ಫ್ಲೆಕ್ಸ್ ತೆರವು ಮಾಡಬೇಕುವೆನ್ನುವುದಾದರೆ ಜಿಲ್ಲೆಯಲ್ಲಿ ಅಳವಡಿಸಿರುವ ಟಿಪ್ಪು ಫ್ಲೆಕ್ಸ್ ಗಳನ್ನು ತೆರವು ಮಾಡುವಂತೆ ಆಗ್ರಹಿಸಿದ್ದಾರೆ. .

ಗಲಾಟೆವ್ ಹಿನ್ನೆಲೆಯಲ್ಲಿ ತಡರಾತ್ರಿವರೆಗೂ ಮೆಟ್ಟಿಕಲ್ ನಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿತು. ಸದ್ಯ ಸ್ಥಳದಲ್ಲಿ ಬಿಗುವಿನ ವಾತಾವರಣವಿದ್ದು, ಭದ್ರತೆಗಾಗಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read