ದಾವಣಗೆರೆ: ನಿರ್ಮಾಣ ಹಂತದ ಕಟ್ಟಡದ ತೊಟ್ಟಿಗೆ ಬಿದ್ದು 6 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ.
ಇಲ್ಲಿನ ಚನ್ನಗಿರಿ ತಾಲೂಕಿನ ಸಂತೆಬೆನ್ನೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಅವಾಜ್ ಖಾನ್ ಮೃತ ಬಾಲಕ. ಫುಟ್ ವೇರ್ ಅಂಗಡಿ ಮಾಲೀಕ ಅಫ್ತಾಬ್ ಖಾನ್ ಅವರ ಪುತ್ರ.
ಮೂತ್ರ ವಿಸರ್ಜನೆಗೆಂದು ತೆರಳಿದ್ದ ವೇಳೆ ನಿರ್ಮಾಣ ಹಂತದ ಕಟ್ಟಡದ ತೊಡ್ದಿಗೆ ಆಯತಪ್ಪಿ ಬಿದ್ದ ಬಾಲಕ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ತೊಟ್ಟಿಯಲ್ಲಿ ಚಪ್ಪಲಿ ತೇಲುತ್ತಿತ್ತು. ಇದನ್ನು ಗಮನಿಸಿದಾಗ ತೊಟ್ಟಿ ಪರಿಶೀಲಿಸುತ್ತಿದ್ದಂತೆ ಬಾಲಕ ನೀರಿನಲ್ಲಿ ಮುಳುಗಿರುವುದು ಪತ್ತೆಯಾಗಿದೆ.
ಸಂತೆಬೆನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
