ಚಿಕ್ಕಮಗಳೂರು : ಮುದ್ದೆಯಲ್ಲಿ ವಿಷ ಹಾಕಿ ಅತ್ತೆಯನ್ನೇ ಸೊಸೆ ಕೊಂದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರದ ತಡಗ ಗ್ರಾಮದಲ್ಲಿ ನಡೆದಿದೆ.
ಅಶ್ವಿನಿ ಎಂಬ ಮಹಿಳೆ ಅತ್ತೆ ದೇವೀರಮ್ಮ(75) ಅವರನ್ನು ಕೊಲೆ ಮಾಡಿದ್ದಾಳೆ. ಮುದ್ದೆಯಲ್ಲಿ ವಿಷ ಹಾಕಿ ಅತ್ತೆಯನ್ನು ಕೊಂದು ನಂತರ ಡ್ರಾಮಾ ಮಾಡಿದ್ದಳು.
ಏನಿದು ಘಟನೆ
ಅಶ್ವಿನಿ ಪ್ರಿಯಕರ ಆಂಜನೇಯ ಎಂಬನ ಜೊತೆ ಅನೈತಿಕ ಸಂಬಂಧ ಹೊಂದಿದ್ದಳು. ಇದಕ್ಕೆ ಅತ್ತೆ ದೇವೀರಮ್ಮ ಅಡ್ಡಿಯಾಗಿದ್ದಳು. ಪ್ರಿಯಕರನಿಗಾಗಿ ಅಶ್ವಿನಿ ಮನೆಯಲ್ಲಿ ಚಿನ್ನಾಭರಣ ಹಾಗೂ ಕಳುವು ಮಾಡುತ್ತಿದ್ದಳು. ಕದ್ದ ಹಣ ಹಾಗೂ ಚಿನ್ನಾಭರಣವನ್ನು ಪ್ರಿಯಕರ ಆಂಜನೇಯನಿಗೆ ಕೊಡುತ್ತಿದ್ದಳು. ಈ ವಿಷಯ ಅತ್ತೆಗೆ ತಿಳಿದಿದ್ದು, ಆದ್ದರಿಂದ ಅತ್ತೆಯನ್ನೇ ಸೊಸೆ ಅಶ್ವಿನಿ ವಿಷ ಹಾಕಿ ಕೊಂದಿದ್ದಾಳೆ. ಈ ವಿಷಯ ಮನೆಯವರಿಗೆ ಗೊತ್ತಾಗದಂತೆ ಹೈಡ್ರಾಮಾ ಮಾಡಿದ್ದಳು. ಮನೆಯವರು ದೇವಿರಮ್ಮ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ ಎಂದು ನಂಬಿದ್ದರು.
ಮನೆಯಲ್ಲಿ 100 ಗ್ರಾಂ ಚಿನ್ನ ಹಾಗೂ 50 ಸಾವಿರ ಹಣ ಕಳುವಾಗಿದ್ದರಿಂದ ಅಶ್ವಿನಿ ನಾದಿನಿ ಪೊಲೀಸರಿಗೆ ದೂರು ನೀಡಿದ್ದರು. ನಂತರ ಪೊಲೀಸರು ಕಳ್ಳತನದ ಪ್ರಕರಣದ ತನಿಖೆ ನಡೆಸಿದಾಗ ಮರ್ಡರ್ ಮಿಸ್ಟರಿ ಕೂಡ ಬಯಲಾಗಿದೆ. ಪೊಲೀಸರು ವಿಚಾರಣೆ ನಡೆಸಿದಾಗ ತಾನೇ ಅತ್ತೆಯನ್ನ ಕೊಂದಿರುವುದಾಗಿ ಅಶ್ವಿನಿ ಹೇಳಿದ್ದಾಳೆ.