ಬೆಂಗಳೂರು : ಎಂಜಿನಿಯರಿಂಗ್, ದಂತ ವೈದ್ಯಕೀಯ, ಪಶು ವೈದ್ಯಕೀಯ, ಕೃಷಿ ವಿಜ್ಞಾನ, ಬಿಎಸ್ ಸಿ ನರ್ಸಿಂಗ್, ಬಿಪಿಟಿ, ಬಿಪಿಒ, ಎಎಚ್ಎಸ್ ಕೋರ್ಸ್ ಗಳ ಪ್ರವೇಶಕ್ಕೆ ಮೊದಲ ಸುತ್ತಿನ ಸೀಟು ಹಂಚಿಕೆಗೆ Options ದಾಖಲಿಸಲು KEA ಜುಲೈ 22 ರವರೆಗೆ ದಿನಾಂಕ ವಿಸ್ತರಿಸಿದೆ.
ಈ ಕೋರ್ಸ್ ಗಳ ಸೀಟ್ ಮ್ಯಾಟ್ರಿಕ್ಸ್ ಬಂದಿದ್ದು ಜುಲೈ 8ರಿಂದ ಆಪ್ಷನ್ಸ್ ದಾಖಲಿಸಲು ಅವಕಾಶ ನೀಡಲಾಗಿದೆ. ವೈದ್ಯಕೀಯ, ಆಯುರ್ವೇದ, ಹೋಮಿಯೋಪತಿ ಮತ್ತು ಯುನಾನಿ, ಫಾರ್ಮಸಿ ಕೋರ್ಸ್ ಗಳ ಸೀಟ್ ಮ್ಯಾಟ್ರಿಕ್ಸ್ ಬಂದ ನಂತರ ಅವುಗಳಿಗೂ ಆಪ್ಷನ್ಸ್ ದಾಖಲಿಸಲು ಅವಕಾಶ ನೀಡಲಾಗುವುದು. ಕೊನೆ ದಿನಾಂಕದವರೆಗೆ ಎಷ್ಟು ಬಾರಿಯಾದರೂ ಇಚ್ಛೆ/ಆಯ್ಕೆಗಳನ್ನು ಬದಲಿಸಿಕೊಳ್ಳಬಹುದು. ಆದರೆ ಅಂತಿಮವಾಗಿ ಬದಲಿಸಿದ್ದು ಮಾತ್ರ ಸೀಟು ಹಂಚಿಕೆಗೆ ಪರಿಗಣಿಸಲಾಗುತ್ತದೆ.
ಸರ್ಕಾರ ನಿಗದಿಪಡಿಸಿರುವ ಪ್ರತಿ ಕೋರ್ಸ್ ಗಳ ಶುಲ್ಕದ ವಿವರಗಳನ್ನು #KEA ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ. ಶುಲ್ಕ ವಿನ್ಯಾಸದಲ್ಲಿ ಏನಾದರು ಬದಲಾವಣೆಯಾದರೂ ಅದನ್ನು ವೆಬ್ ಸೈಟ್ ನಲ್ಲಿ ಹಾಕಲಾಗುವುದು. ಅಭ್ಯರ್ಥಿಗಳು ಮೇಲಿಂದ ಮೇಲೆ ವೆಬ್ ಸೈಟ್ ನೋಡುವುದು ಉತ್ತಮ ಎಂದು ಎಚ್.ಪ್ರಸನ್ನ ಐಎಎಸ್ ಕಾರ್ಯನಿರ್ವಾಹಕ ನಿರ್ದೇಶಕರು ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಇವರು ತಿಳಿಸಿದ್ದಾರೆ.
#UGCET-25: ಎಂಜಿನಿಯರಿಂಗ್, ದಂತ ವೈದ್ಯಕೀಯ, ಪಶು ವೈದ್ಯಕೀಯ, ಕೃಷಿ ವಿಜ್ಞಾನ, ಬಿಎಸ್ ಸಿ ನರ್ಸಿಂಗ್, ಬಿಪಿಟಿ, ಬಿಪಿಒ, ಎಎಚ್ಎಸ್ ಕೋರ್ಸ್ ಗಳ ಪ್ರವೇಶಕ್ಕೆ ಮೊದಲ ಸುತ್ತಿನ ಸೀಟು ಹಂಚಿಕೆಗೆ #Options ದಾಖಲಿಸಲು #KEA ಜುಲೈ 22 ರವರೆಗೆ ದಿನಾಂಕ ವಿಸ್ತರಿಸಿದೆ.
— ಕರ್ನಾಟಕ ಪರೀಕ್ಷಾ ಪ್ರಾಧಿಕಾರ KEA (@KEA_karnataka) July 18, 2025
ಈ ಕೋರ್ಸ್ ಗಳ ಸೀಟ್ ಮ್ಯಾಟ್ರಿಕ್ಸ್ ಬಂದಿದ್ದು ಜುಲೈ 8ರಿಂದ ಆಪ್ಷನ್ಸ್… pic.twitter.com/wbWYPOCUMi