ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ದಿ ಡೆವಿಲ್’ ಸಿನಿಮಾ ಡಿಸೆಂಬರ್ 11ರಂದು ಬಿಡುಗಡೆಯಾಗಲಿದೆ. ಅಂದು ಬೆಳಗ್ಗೆ 6 ಗಂಟೆಗೆ ಮೊದಲ ಶೋ ಶುರುವಾಗಲಿದ್ದು, ಇದರ ಟಿಕೆಟ್ ಈಗಾಗಲೇ ಸೋಲ್ಡ್ ಔಟ್ ಆಗಿದೆ. 500 ರೂ., 600 ರೂ., 900 ರೂಪಾಯಿವರೆಗೂ ಟಿಕೆಟ್ ಮಾರಾಟವಾಗಿದೆ. ಮುಂಗಡ ಬುಕಿಂಗ್ ನಿಂದಲೇ ಅಂದಾಜು 3.5 ಕೋಟಿ ರೂ ಸಂಗ್ರಹವಾಗಿದೆ.
ಸದ್ಯ ಗಂಟೆಗೆ 11,000 ಟಿಕೆಟ್ ಬುಕಿಂಗ್ ಆಗಿದ್ದು, 55 ಸಾವಿರಕ್ಕೂ ಹೆಚ್ಚು ಫ್ಯಾನ್ಸ್ ಶೋಗಳ ಟಿಕೆಟ್ ಸೇಲ್ ಆಗಿದೆ. ದರ್ಶನ್ ಸಿನಿಮಾ ಗೆಲ್ಲಿಸಲೇಬೇಕೆಂದುಕೊಂಡಿರುವ ಅಭಿಮಾನಿಗಳಿಂದ ಫಸ್ಟ್ ಡೇ ಫಸ್ಟ್ ಶೋ ಹೌಸ್ ಫುಲ್ ಆಗಿದೆ. ಶೋಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಗುರುವಾರ ಬೆಳಿಗ್ಗೆ 6 ಗಂಟೆಗೆ ಮೊದಲ ಪ್ರದರ್ಶನ ಶುರುವಾಗಲಿದೆ. ಚಿತ್ರದ ಕುರಿತಾಗಿ ನಿರೀಕ್ಷೆ ಭಾರೀ ಹೆಚ್ಚಿದೆ. ತೆರೆ ಮೇಲೆ ದರ್ಶನ್ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರದಲ್ಲಿದ್ದಾರೆ.
