ಸಿದ್ಧಾರೂಡ ಜೈಲಿನಲ್ಲಿ ನಟ ದರ್ಶನ್ ಭೇಟಿಯಾಗಿದ್ದು ನಿಜವೇ? ಕಾರಾಗೃಹ ಇಲಾಖೆಗೆ ನೀಡಿದ ರಿಪೋರ್ಟ್ ನಲ್ಲಿ ಏನಿದೆ?

ಬೆಂಗಳೂರು: ಸನ್ನಡತೆಯ ಆಧಾರಾದ ಮೇಲೆ ಜೈಲಿನಿಂದ ಬಿಡುಗಡೆಯಾಗಿದ್ದ ಸಿದ್ಧಾರೂಡ, ಜೈಲಿನಲ್ಲಿ ತಾನು ನಟ ದರ್ಶನ್ ಅವರನ್ನು ಭೇಟಿಯಾಗಿದ್ದಾಗಿ ಹೇಳಿಕೊಂಡಿದ್ದರು. ಇದರ ಬೆನ್ನಲ್ಲೇ ಸಿದ್ಧಾರೂಡಗೆ ಸಂಕಷ್ಟ ಎದುರಾಗಿದೆ.

ಜೈಲಿನಲ್ಲಿ ದರ್ಶನ್ ಭೇಟಿಯಾಗಿದ್ದಾಗಿ ಸಿದ್ಧಾರೂಡ ಸುಳ್ಳು ಕಥೆ ಕಟ್ಟಿದ್ರಾ ಎಂಬ ಅನುಮಾನ ವ್ಯಕ್ತವಾಗಿದೆ. ಇತ್ತೀಚೆಗೆ ಸಿದ್ಧಾರೂಡ ಕೆಲ ಮಾದ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ ತಾನು ಜೈಲಿನಲ್ಲಿ ನಟ ದರ್ಶನ್ ಅವರನ್ನು ಭೇಟಿಯಾಗಿದ್ದಾಗಿ, ಅವರು ಬದಲಾಗಿದ್ದಾಗಿ, ಆಧ್ಯಾತ್ಮಿಕದತ್ತ ಮನಸ್ಸು ಮಾಡುತ್ತಿರುವುದಾಗಿ ಹೇಳಿದ್ದರು. ಅಲ್ಲದೇ ದರ್ಶನ್ ಅವರಿಗೆ ತಾನು ಧ್ಯಾನದ ವಿಧಾನವನ್ನೂ ಹೇಳಿಕೊಟ್ಟಿದ್ದಾಗಿ ತಿಳಿಸಿದ್ದರು. ಸಿದ್ಧಾರೂಡ ಜೈಲಿನಲ್ಲಿ ದರ್ಶನ್ ಭೇಟಿ ಹೇಳಿಕೆ ನೀಡಿರುವ ಬೆನ್ನಲ್ಲೇ ದರ್ಶನ್ ಭೇಟಿಗೆ ಯಾರಿಗೂ ಅವಕಾಶ ನೀಡಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಜೈಲಿನಲ್ಲಿ ದರ್ಶನ್ ಹಾಗೂ ಸಿದ್ಧಾರೂಡ ಭೇಟಿ ಮಾಡಿಲ್ಲ. ದರ್ಶನ್ ಭದ್ರತಾ ಸೆಲ್ ನಲ್ಲಿದ್ದು, ಭೇಟಿಗೆ ಯಾರಿಗೂ ಅವಕಾಶ ನೀಡಿಲ್ಲ ಎಂದು ಜಿಲ್ಲಾಧಿಕಾರಿಗಳು ಕಾರಾಗೃಹ ಇಲಾಖೆಗೆ ರಿಪೋರ್ಟ್ ಕೊಟ್ಟಿದ್ದಾರೆ.

ಸಿದ್ಧಾರೂಢ ಜುಲೈ 8ರಂದು ಬಳ್ಳಾರಿ ಜೈಲಿನಿಂದ ಸೆಂಟ್ರಲ್ ಜೈಲಿಗೆ ಬಂದಿದ್ದರು. 18 ಗಂಟೆಗಳ ಕಾಲ ಸಿದ್ಧಾರೂಢ ಜೈಲಿನಲ್ಲಿ ಇದ್ದಿರುವುದಾಗಿ ವರದಿಯಾಗಿದೆ. ಜುಲೈ 9ರಂದು ಸನ್ನಡತೆ ಆಧಾರದ ಮೇಲೆ ಸಿದ್ಧಾರೂಡ ಬಿಡುಗಡೆಯಾಗಿದ್ದಾರೆ. ಈ ಬಗ್ಗೆ ಎರಡು ಕಡೆಯ ಜೈಲಾಧಿಕಾರಿಗಳಿಗೆ ಕಾರಾಗೃಹ ಇಲಾಖೆ ನೋಟಿಸ್ ನೀಡಿತ್ತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read