ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಎರಡನೇ ಬಾರಿ ಜೈಲು ಸೇರಿರುವ ನಟ ದರ್ಶನ್ ಹಾಗೂ ಗ್ಯಾಂಗ್ ನ ಸೆರೆವಾಸ 7 ನೇ ದಿನಕ್ಕೆ ಕಾಲಿಟ್ಟಿದೆ. ಪರಪ್ಪನ ಅಗ್ರಹಾರ ಜೈಲಿನ ಊಟ, ನಿಯಮಗಳಿಗೆ ಈಬಾರಿ ನಟ ದರ್ಶನ್ ಹೊಂದಿಕೊಂಡಿದ್ದಾರೆ.
ಈ ಬಾರಿ ನಟ ದರ್ಶ ಹಾಗೂ ಗ್ಯಾಂಗ್ ಗೆ ಯಾವುದೇ ರಾಜಾತಿಥ್ಯ, ಮೊಬೈಲ್ ಬಳಕೆಗೆ ಅವಕಾಶಗಳಿಲ್ಲ. ಎಲ್ಲಾ ಕೈದಿಗಳಂತೆ ಕಟ್ಟುನಿಟ್ಟಾದ ನಿಯಮ ಪಾಲಿಸುವಂತೆ ನೋಡಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ದರ್ಶನ್ ಜಿನ ಊಟ, ತಿಂಡಿ, ನಿಯಮಗಳಿಗೆ ಹೊಂದಿಕೊಂಡಿದ್ದಾರೆ ಎನ್ನಲಾಗಿದೆ.
ನಿನ್ನೆ ರಾತ್ರಿ ಚಪಾತಿ, ಮೊಟ್ಟೆಯನ್ನು ಸೇವಿಸಿದ್ದಾರೆ. ಇಂದು ಬೆಳಿಗ್ಗೆ ಅವಲಕ್ಕಿ, ಚಿತ್ರಾನ್ನ ಸೇವನೆ ಮಾಡಿದ್ದಾರೆ. ಬಳಿಕ ಜೈಲಿನಲ್ಲಿ ದಿನಪತ್ರಿಕೆಗಳತ್ತ ಕಣ್ಣಾಡಿಸಿದ್ದಾರೆ. ನಂತರ ಸಹಚರರ ಜೊತೆ ಮಾತನಾಡುತ್ತಾ ದಿನ ಕಳೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.