ದರ್ಶನ್ ಸ್ಥಳಾಂತರ ಹಿನ್ನೆಲೆ ಬಳ್ಳಾರಿಯಲ್ಲೇ ಬಾಡಿಗೆ ಮನೆ ಮಾಡಲು ಕುಟುಂಬದವರ ಚಿಂತನೆ: ಜೈಲು ಬದಲಾವಣೆಗೆ ಕೋರ್ಟ್ ಮೊರೆ ಸಾಧ್ಯತೆ

ಬಳ್ಳಾರಿ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಬಂಧಿತರಾಗಿರುವ ನಟ ದರ್ಶನ್ ಬೆಂಗಳೂರಿನಿಂದ ಬಳ್ಳಾರಿ ಸೆಂಟ್ರಲ್ ಜೈಲ್ ಗೆ ಸ್ಥಳಾಂತರಗೊಂಡಿದ್ದಾರೆ.

ಬಳ್ಳಾರಿ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿರುವ ದರ್ಶನ್ ಇನ್ನು ಎಷ್ಟು ದಿನ ಇರುತ್ತಾರೆ ಎನ್ನುವುದು ಅಸ್ಪಷ್ಟವಾಗಿದೆ. ಹೀಗಾಗಿ ಮಾನಸಿಕವಾಗಿ ಕುಗ್ಗಿರುವ ದರ್ಶನ್ ಅವರಿಗೆ ಆತ್ಮಸ್ಥೈರ್ಯ ತುಂಬಲು ಕಾರಾಗೃಹದ ನಿಯಮಗಳ ಅನುಸಾರ ಅವರ ಭೇಟಿಗೆ ಅನುಕೂಲವಾಗುವಂತೆ ಅವರ ಕುಟುಂಬದವರು ಬಳ್ಳಾರಿಯಲ್ಲೇ ಬಾಡಿಗೆ ಮನೆ ಹುಡುಕಾಟಕ್ಕೆ ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

ಆಗಸ್ಟ್ 31 ಅಥವಾ ಸೆಪ್ಟೆಂಬರ್ 2 ರಂದು ದರ್ಶನ್ ಅವರ ಭೇಟಿಯಾಗಲು ಪತ್ನಿ, ಪುತ್ರ ಮತ್ತು ವಕೀಲರು ಆಗಮಿಸುವ ಸಾಧ್ಯತೆ ಇದೆ. ದರ್ಶನ್ ಸ್ಥಳಾಂತರ ಆರಂಭದ 7 ದಿನ ಕುಟುಂಬದವರು ಮತ್ತು ವಕೀಲರ ನಿರಂತರ ಭೇಟಿಗೆ ಅವಕಾಶವಿದೆ. ಎರಡು ದಿನ ಕಳೆದರೂ ದರ್ಶನ್ ಅವರನ್ನು ಇದುವರೆಗೂ ಯಾರೂ ಭೇಟಿಯಾಗಲು ಬಂದಿಲ್ಲ.

7 ದಿನಗಳ ನಂತರ ಕುಟುಂಬದವರಿಗೆ ವಾರದಲ್ಲಿ ಒಂದು ದಿನ ಮಾತ್ರ ದರ್ಶನ್ ಭೇಟಿಗೆ ಅವಕಾಶ ನೀಡಲಾಗುತ್ತದೆ. ಬಳ್ಳಾರಿ ವಾತಾವರಣ ದರ್ಶನ್ ಗೆ ಹೊಂದಿಕೆಯಾಗಿಲ್ಲ. ಅವರು ಮಾನಸಿಕವಾಗಿ ಕುಗ್ಗಿದ್ದಾರೆ. ಹೀಗಾಗಿ ಕುಟುಂಬದವರು ಅವರನ್ನು ಭೇಟಿಯಾಗಿ ಆತ್ಮಸ್ಥೈರ್ಯ ತುಂಬಲು ನಿರ್ಧರಿಸಿದ್ದಾರೆ.

ಇನ್ನು ಬಳ್ಳಾರಿ ವಾತಾವರಣ ಹೊಂದಿಕೆಯಾಗದಿರುವುದು ಸೇರಿದಂತೆ ವಿವಿಧ ಕಾರಣಗಳನ್ನು ಮುಂದಿಟ್ಟುಕೊಂಡು ಜೈಲು ಬದಲಾವಣೆಗೆ ದರ್ಶನ್ ಕುಟುಂಬದವರು ನ್ಯಾಯಾಲಯದ ಮೊರೆ ಹೋಗಲು ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read