7 ಮಕ್ಕಳನ್ನು ಕೂರಿಸಿಕೊಂಡು ಸ್ಕೂಟರ್ ಸವಾರಿ; ಅಪಾಯಕಾರಿ ಪ್ರಯಾಣದ ವಿಡಿಯೋ ವೈರಲ್

ಉತ್ತರಪ್ರದೇಶದ ಮೀರತ್‌ನಿಂದ ವೈರಲ್ ಆಗಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ಏಳು ಮಕ್ಕಳೊಂದಿಗೆ ಸ್ಕೂಟರ್‌ನಲ್ಲಿ ಪ್ರಯಾಣ ಮಾಡಿದ್ದಾರೆ. ಓರ್ವ ಒಬ್ಬ ಪುಟ್ಟ ಹುಡುಗಿ ಸ್ಕೂಟರ್‌ನ ಫುಟ್‌ರೆಸ್ಟ್ ನಲ್ಲಿ ನಿಂತಿದ್ದಾರೆ.

ಮೀರತ್‌ನ ಸರ್ದಾನಾ ತಹಸಿಲ್‌ನಲ್ಲಿ ಚಿತ್ರೀಕರಿಸಿರುವ ಈ ವಿಡಿಯೋ ವೈರಲ್ ಆದ ನಂತರ ಉತ್ತರಪ್ರದೇಶ ಪೊಲೀಸರು ವಿಡಿಯೋ ಪರಿಶೀಲಿಸಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಮೀರತ್ ಪೊಲೀಸರನ್ನು ಟ್ಯಾಗ್ ಮಾಡಿದ್ದಾರೆ.

ವ್ಯಕ್ತಿಯ ವಿರುದ್ಧ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಮೀರತ್ ಪೊಲೀಸರು ಉತ್ತರಿಸಿದ್ದಾರೆ. ಏಪ್ರಿಲ್ 27 ರಂದು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ವೈರಲ್ ಆಗಿದೆ.

ವೀಡಿಯೊದಲ್ಲಿ 30 ರ ಆಸುಪಾಸಿನ ವ್ಯಕ್ತಿಯೊಬ್ಬರು ಸ್ಕೂಟರ್ ಸವಾರಿ ಮಾಡುತ್ತಿರುವುದು ಕಂಡುಬಂದಿದೆ. 4-5 ವರ್ಷ ವಯಸ್ಸಿನ ಮಕ್ಕಳು ದ್ವಿಚಕ್ರ ವಾಹನದಲ್ಲಿ ನಗುತ್ತಾ ಮೋಜು ಮಾಡುತ್ತಿದ್ದಾರೆ.

https://twitter.com/Uppolice/status/1651605931006853123?ref_src=twsrc%5Etfw%7Ctwcamp%5Etweetembed%7Ctwterm%5E165160791084408012

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read