ನಾಯಕನಟನಾಗಿ, ನೃತ್ಯ ನಿರ್ದೇಶಕನಾಗಿ, ಮತ್ತು ನಿರ್ದೇಶಕರಾಗಿಯೂ ಸಾಕಷ್ಟು ಹೆಸರು ಮಾಡಿರುವ ಡ್ಯಾನ್ಸ್ ಕಿಂಗ್ ಪ್ರಭುದೇವ ಇಂದು ತಮ್ಮ 51ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. 1988 ರಲ್ಲಿ ತಮಿಳಿನ ‘ಜೀವ’ ಚಿತ್ರದಲ್ಲಿ ‘ಅಬ್ರಕಡಬ್ರಾ’ ಎಂಬ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದರು. 1990 ರಲ್ಲಿ ‘ಮೈಕೆಲ್ ಮದನ ಕಾಮ ರಾಜನ್’ ನಲ್ಲಿ ನೃತ್ಯ ನಿರ್ದೇಶನ ಮಾಡಿದರು. 1994ರಲ್ಲಿ ತಮಿಳಿನ ‘ಇಂಧು’ ಚಿತ್ರದಲ್ಲಿ ಚೊಚ್ಚಲ ಬಾರಿ ನಾಯಕ ನಟನಾಗಿ ಕಾಣಿಸಿಕೊಂಡ ಇವರು ತಮಿಳು ಸೇರಿದಂತೆ ಕನ್ನಡ, ತೆಲುಗು, ಮಲಯಾಳಂ, ಮತ್ತು ಹಿಂದಿ ಚಿತ್ರರಂಗದಲ್ಲಿ ತಮ್ಮದೇ ಆದ ಚಾಪು ಮೂಡಿಸಿದ್ದಾರೆ.
2005ರಲ್ಲಿ ಸಿದ್ದಾರ್ಥ್ ಅಭಿನಯದ ‘ನುವ್ವೋಸ್ತಾನಂತೇ ನೆನೊಡ್ಡಂತಾನ’ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವ ಮೂಲಕ ನಿರ್ದೇಶನಕ್ಕಿಳಿದರು. ಪ್ರಭುದೇವ ಇತ್ತೀಚಿಗೆ ಯೋಗರಾಜ್ ಭಟ್ ನಿರ್ದೇಶನದ ‘ಕರಟಕ ದಮನಕ’ ಚಿತ್ರದಲ್ಲಿ ತೆರೆ ಹಂಚಿಕೊಂಡಿದ್ದು, ‘ಫ್ಲಾಶ್ ಬ್ಯಾಕ್’ ಮತ್ತು ‘ದಿ ಗ್ರೇಟೆಸ್ಟ್’ ಆಫ್ ಆಲ್ ಟೈಮ್’ ಶೂಟಿಂಗ್ನಲ್ಲಿ ಬಿಜಿಯಾಗಿದ್ದಾರೆ.
A very happy bday @PDdancing master!! With love from ur #TheGOATteam #TheGreatestOfAllTime pic.twitter.com/W6xMNfAV8v
— venkat prabhu (@vp_offl) April 3, 2024
The amazing @PDdancing celebrates his birthday today! 🕺🏽
Join us in wishing the star a wonderful year ahead 🩶
➡️ https://t.co/6foL3Wg6wY#HBDPrabhuDeva #HappyBirthdayPrabhuDeva pic.twitter.com/BEaVVuOmQo
— Sony Music South India (@SonyMusicSouth) April 3, 2024
#PettaRap's hero @PDdancing master gets a special poster from the team on his birthday.
A @sinu_sj ride! pic.twitter.com/ec7N3gBiB2
— Siddarth Srinivas (@sidhuwrites) April 3, 2024