ಫುಟ್​ಬಾಲ್​ ಆಟಗಾರನ ಚಿಕಿತ್ಸೆಗೆ 66 ಕೋಟಿ ರೂ. ಸಂಗ್ರಹ

ಅಮೆರಿಕನ್​ ಫುಟ್​ಬಾಲ್​ ಆಟಗಾರ ಡಮರ್ ಹ್ಯಾಮ್ಲಿನ್ ಕಳೆದ ವಾರ ಆಟದ ಸಮಯದಲ್ಲಿ ಹೃದಯ ಸ್ತಂಭನಕ್ಕೆ ಒಳಗಾದ ನಂತರ, ಅವರ ಚಿಕಿತ್ಸೆಗಾಗಿ ಆನ್‌ಲೈನ್ ನಿಧಿ ಸಂಗ್ರಹಣೆ ಮಾಡಲಾಗುತ್ತಿದೆ. ಇದು ಇಲ್ಲಿಯವರೆಗೆ $8 ಮಿಲಿಯನ್‌ (ಸುಮಾರು 66 ಕೋಟಿ ರೂಪಾಯಿ) ಗಿಂತಲೂ ಹೆಚ್ಚು ನಿಧಿ ಸಂಗ್ರಹವಾಗಿದೆ.

ಈ ಕುರಿತು GoFundME ಪೋಸ್ಟ್ ಮಾಡಿದೆ. “ ಮೈದಾನದಲ್ಲಿ ಡಮರ್​ ಹ್ಯಾಮ್ಲಿನ್​ ಅವರು ಹೃದಯಸ್ಥಂಭನಕ್ಕೊಳಗಾದ ನಂತರ, ದೇಶಾದ್ಯಂತ ಅಭಿಮಾನಿಗಳು ಅವರ ನಿಧಿಸಂಗ್ರಹಕ್ಕೆ ದೇಣಿಗೆ ನೀಡುವ ಮೂಲಕ ಅವರಿಗೆ ಮತ್ತು ಅವರ ಕುಟುಂಬಕ್ಕೆ ತಮ್ಮ ಬೆಂಬಲವನ್ನು ತೋರಿಸುತ್ತಿದ್ದಾರೆ. ದೇಣಿಗೆಗಳು $8,672,090 ಕ್ಕೆ ಏರಿಕೆಯಾಗಿದೆ ಎಂದು ವೆಬ್‌ಸೈಟ್ ಹೇಳಿದೆ.

ಹ್ಯಾಮ್ಲಿನ್ ಆಸ್ಪತ್ರೆಗೆ ದಾಖಲಾದ ನಂತರ ಫುಟ್‌ಬಾಲ್ ಅಭಿಮಾನಿಗಳು ನೆರವಿಗೆ ಧಾವಿಸಿದ್ದು, ದೇಣಿಗೆಗಳು ಮತ್ತು ಪ್ರಾರ್ಥನೆಗಳು ಹರಿದು ಬರಲಾರಂಭಿಸಿದವು.

ಚೇಸಿಂಗ್ ಎಂ ಫೌಂಡೇಶನ್ ಅನ್ನು ಹ್ಯಾಮ್ಲಿನ್ ಅವರು ತಮ್ಮ ಸಮುದಾಯದ ಮಕ್ಕಳಿಗೆ ಸಹಾಯ ಮಾಡಲು ಪ್ರಾರಂಭಿಸಿದ್ದಾರೆ. ಇದರ ಮೂಲಕ ಅವರು ಬ್ಯಾಕ್-ಟು-ಸ್ಕೂಲ್ ಡ್ರೈವ್‌ಗಳು ಮತ್ತು ಕಿಡ್ ಕ್ಯಾಂಪ್‌ಗಳನ್ನು ಬೆಂಬಲಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೂ ಹಣದ ಹೊಳೆ ಹರಿದುಬಂದಿದೆ.

https://twitter.com/gofundme/status/1610116959185817601?ref_src=twsrc%5Etfw%7Ctwcamp%5Etweetembed%7Ctwterm%5E1610116959185817601%7Ctwgr%5Ea770cc7f0f980c9a459620d9dd713bf0d5812674%7Ctwcon%5Es1_&ref_url=https%3A%2F

 

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read