ವರುಣಾರ್ಭಟಕ್ಕೆ ಸೇತುವೆ ಜಲಾವೃತ; ನೀರಿನಲ್ಲಿ ಕೊಚ್ಚಿ ಹೋದ ಪಿಕಪ್ ವಾಹನ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಧಾರಾಕಾರ ಮಳೆಯಾಗುತ್ತಿದ್ದು, ನದಿ, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ವರುಣಾರ್ಭಟದ ನಡುವೆ ಸೇತುವೆ ದಾಟುತ್ತಿದ್ದ ಪಿಕಪ್ ವಾಹನ ನೀರುಪಾಲಾಗಿರುವ ಘಟನೆ ಸುಬ್ರಹ್ಮಣ್ಯದ ಬಳಿ ನಡೆದಿದೆ.

ಸುಬ್ರಹ್ಮಣ್ಯ ಸಮೀಪದ ಕಲ್ಮಕಾರಿನ ನದಿ ಉಕ್ಕಿ ಹರಿಯುತ್ತಿದೆ. ಪಿಕಪ್ ವಾಹನವೊಂದು ತೆಂಗಿನಕಾಯಿ ಲೋಡ್ ಮಾಡಿಕೊಂಡು ಸೇತುವೆ ಮೇಲೆ ತೆರಳುತ್ತಿದ್ದ ವೇಳೆ ಏಕಾಏಕಿ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಸೇತುವೆ ಜಲಾವೃತಗೊಂಡಿದೆ. ಚಾಲಕನ ನಿಯಂತ್ರಣ ಕಳೆದುಕೊಂಡ ವಾಹನ ನೀರುಪಾಲಾಗಿದೆ.

ನೋಡನೋಡುತ್ತಿದ್ದಂತೆಯೇ ಪಿಕಪ್ ವಾಹನ ಸೇತುವೆಯಿಂದ ಕೆಳಗೆ ಬಿದ್ದು ನೀರಿನಲ್ಲಿ ಕೊಚ್ಚಿ ಹೋಗಿದೆ. ತಕ್ಷಣ ಸ್ಥಳೀಯರು ವಾಹನ ಚಾಲಕನನ್ನು ರಕ್ಷಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read