ಆಹಾರದಲ್ಲಿ ಪ್ರತಿನಿತ್ಯ ಬಳಸಿ ಬುದ್ಧಿಶಕ್ತಿ ಹೆಚ್ಚಿಸುವ ತುಪ್ಪ

ತುಪ್ಪ ತಿಂದರೆ ಕೊಬ್ಬು ಹೆಚ್ಚಾಗಿ ಬೊಜ್ಜು ಬೆಳೆಯುತ್ತದೆ ಎಂದು ಅದರ ಸೇವನೆಯನ್ನೇ ಕೈಬಿಟ್ಟಿದ್ದೀರಾ, ಹಾಗಾದರೆ ನಿಮ್ಮ ದೇಹ ಅತ್ಯಾವಶ್ಯಕ ಪೋಷಣೆಯಿಂದ ದೂರವಿದೆ ಎಂದರ್ಥ.

ಮನೋಸ್ಥೈರ್ಯ, ಬುದ್ಧಿಶಕ್ತಿಯನ್ನು ಹೆಚ್ಚಿಸುವ ಇದರ ಸೇವನೆಯಿಂದ ಲೈಂಗಿಕ ಶಕ್ತಿ ಹೆಚ್ಚುತ್ತದೆ. ಉತ್ತಮ ಸಂತಾನ, ದೃಷ್ಟಿ, ಸೌಂದರ್ಯ ಲಭ್ಯವಾಗುತ್ತದೆ. ನಮ್ಮ ಮೆದುಳಿನ ಪೋಷಣೆಗೆ ತುಪ್ಪ ಅತ್ಯಗತ್ಯ.

ಆಸಿಡಿಟಿ ಸಮಸ್ಯೆಯನ್ನು ತುಪ್ಪ ಪರಿಹರಿಸುತ್ತದೆ. ರಕ್ತ, ಮಾಂಸ ಖಂಡಗಳು, ಮೂಳೆಗಳ ಬೆಳವಣಿಗೆಗೆ ನೆರವಾಗುತ್ತದೆ. ಮುಖಕ್ಕೆ ಇತರ ಕ್ರೀಮ್ ಹಚ್ಚುವ ಬದಲು ನಿತ್ಯ ತುಪ್ಪವನ್ನು ಲೇಪಿಸುವುದರಿಂದ ಮೊಡವೆ ಸಮಸ್ಯೆ ದೂರವಾಗುತ್ತದೆ. ಕಲೆಗಳು ಮಾಯವಾಗುತ್ತದೆ.

ಊಟದ ಆರಂಭದಲ್ಲಿ ಇದನ್ನು ಸೇವಿಸಬೇಕು, ಆಹಾರದೊಂದಿಗೆ ತಿನ್ನಬೇಕು. ಪಿತ್ತ, ಅಜೀರ್ಣ, ವಾಂತಿ ಬೇಧಿ ಸಮಸ್ಯೆಯಿದ್ದರೆ ವೈದ್ಯರ ಸಲಹೆ ಪಡೆದೇ ಸೇವಿಸಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read