BIG NEWS: ಬಿ.ಕೆ.ಹರಿಪ್ರಸಾದ್ ನಂಬರ್ ಒನ್ ಭಯೋತ್ಪಾದಕ; ಒಬ್ಬ ಜನಪ್ರತಿನಿಧಿಯಾಗಿ ಜನರಲ್ಲಿ ಭಯ ಹುಟ್ಟಿಸುತ್ತಿದ್ದಾರೆ; ಡಿ.ವಿ.ಎಸ್.ಆಕ್ರೋಶ

ಬೆಂಗಳೂರು: ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ನಂಬರ್ ಒನ್ ಭಯೋತ್ಪಾದಕ. ಒಬ್ಬ ಜನಪ್ರತಿನಿಧಿಯಾಗಿ ಜನರಲ್ಲಿ ಭಯ ಹುಟ್ಟಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಡಿ.ವಿ.ಸದಾನಂದಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ವಿ.ಸದಾನಂದಗೌಡ, ಬಿ.ಕೆ.ಹರಿಪ್ರಸಾದ್ ಒಬ್ಬ ಟೆರರಿಸ್ಟ್ ತರ ಮಾತನಾಡುತ್ತಿದ್ದಾರೆ. ಹಾಗಾಗಿ ನನಗೆ ಅನುಮಾನವಿದೆ. ಮೊದಲು ಬಿ.ಕೆ.ಹರಿಪ್ರಸಾದ್ ಗೆ ರಕ್ಷಣೆ ಕೊಡಬೇಕು. ಜನರು ಹರಿಪ್ರಸಾದ್ ಅವರ ಕೈಕಾಲು ಮುರಿಯಬಹುದು ಎಂದು ಹೇಳಿದ್ದಾರೆ.

ಗೋದ್ರಾದಲ್ಲಿ ನಡೆದ ಘಟನೆ ಇಲ್ಲಿಯೂ ನಡೆಯಬಹುದು ಎಂಬ ಹೇಳಿಕೆ ನೀಡಿರುವ ಬಿ.ಕೆ.ಹರಿಪ್ರಸಾದ್ ಅವರನ್ನು ತಕ್ಷಣ ಬಂಧಿಸಬೇಕು. ಬೆ.ಕೆ.ಹರಿಪ್ರಸಾದ್ ಟೆರರಿಸ್ಟ್ ಮಾದರಿಯಲ್ಲಿ ಕಾಣುತ್ತಾರೆ ಬೆಂಕಿ ಹಾಕೋಣ ಎಂದು ಕೆಲವರು ಯೋಚಿಸಬಹುದು. ಇವರ ಹೇಳಿಕೆಯಿಂದ ರೈಲಿಗೆ ಬೆಂಕಿ ಹಾಕೋಣ ಎಂದು ಯೋಚಿಸಲೂ ಬಹುದು. ಜನರಲ್ಲಿ ಭಾವನೆ ವ್ಯಕ್ತಪಡಿಸಿ ಪ್ರಚೋದನೆ ನೀಡುತ್ತಿದ್ದಾರೆ. ಹಾಗಾಗಿ ಮೊದಲು ಅವರನ್ನು ಬಂಧಿಸಲಿ ಎಂದು ಸದಾನಂದಗೌಡ ಆಗ್ರಹಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read