ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಎಲ್ಲಿನೋಡಿದರಲ್ಲಿ ರಸ್ತೆಗುಂಡಿಗಳದ್ದೇ ಕಾರುಬಾರು, ಅವ್ಯವಸ್ಥೆ ಆಗರ. ಮಳೆ ಬಂತೆಂದರೆ ಗುಂಡಿಯಮಯ ರಸ್ತೆಗಳಲ್ಲಿ ನೀರು ನಿಂತು ಅವಾಂತರವೇ ಸೃಷ್ಟಿಯಾಗಿರುತ್ತದೆ. ರಸ್ತೆಗುಂಡಿಗಳಿಗೆ ಬಿದ್ದು ಗಾಯಗೊಂಡಿರುವ ವಾಹನ ಸವಾರರು, ಶಾಲಾ ಬಸ್ ಗಳಿಗಂತೂ ಲೆಕ್ಕವೇ ಇಲ್ಲ. ರಸ್ತೆಗುಂಡಿಗಳಿಂದ ಅದ್ವಾನವಾಗಿರುವ ಬೆಂಗಳೂರಿನ ರಸ್ತೆಗಳನ್ನು ಸರಿಪಡಿಸುವಂತೆ ಡಿಸಿಎಂ ಡಿ.ಕೆ.ಶಿವಕುಮಾರ್ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ನಗರದ ಎಲ್ಲಾ ರಸ್ತೆಗುಂಡಿಗಳನ್ನು ಶೀಘ್ರವಾಗಿ ಮುಚ್ಚಬೇಕು. ಅಲ್ಲಿಂದ ಇಲ್ಲಿಯವರೆಗೆ ರಸ್ತೆ ಮಾಡಿದ್ದೀವಿ. ಇಲ್ಲಿಂದ ಅಲ್ಲಿಯವರೆಗೆ ರಸ್ತೆ ಸರಿಪಡಿಸಿದ್ದೀವಿ ಎಂದು ಸುಮ್ಮನೇ ವರದಿ ಬರೆದರೆ ಆಗಲ್ಲ. ಒಂದೇ ಒಂದು ರಸ್ತೆ ಗುಂಡಿ ಇದ್ದರೂ ಅದು ನಿಮ್ಮ ಜವಾಬ್ದಾರಿ. ರಸ್ತೆಗುಂಡಿಗಳನ್ನು ಸಂಪೂರ್ಣವಾಗಿ ಮುಚ್ಚಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ಬೆಂಗಳೂರಿನ ರಸ್ತೆಗುಂಡಿಗಳನ್ನು ಮುಚ್ಚುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇವೆ ಎಂದು ಹೇಳಿದರು.