BIG NEWS: ಡಿಕೆಶಿ ಕನಸು ನುಚ್ಚುನೂರು: ಸಿಎಂ ಸಿದ್ದರಾಮಯ್ಯ ಬಣದ ಮೇಲುಗೈ: ಬಿಜೆಪಿ ಟಾಂಗ್

ಬೆಂಗಳೂರು: ಸಿಎಂ ಹುದ್ದೆಯ ಮೇಲೆ ಕಣ್ಣಿಟ್ಟಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್ ಕನಸು ನುಚ್ಚುನೂರಾಗಿದೆ. ಸಿಎಂ ಸಿದ್ದರಾಮಯ್ಯ ಬಣ ಮೇಲುಗೈ ಸಾಧಿಸಿದೆ ಎಂದು ರಾಜ್ಯ ಬಿಜೆಪಿ ಡಿ.ಕೆ.ಶಿವಕುಮಾರ್ ಕಾಲೆಳೆದಿದೆ.

ರಾಜ್ಯ ಕಾಂಗ್ರೆಸ್ಸಿನ ಕಲಹ ಅಂತಿಮ ಘಟ್ಟಕ್ಕೆ ಬಂದು ತಲುಪಿದೆ. ಕೆಪಿಸಿಸಿ ಅಧ್ಯಕ್ಷರನ್ನು ಬದಲಾಯಿಸಲು ಅಂತಿಮ ಮುದ್ರೆ ಬಿದ್ದಿದೆ. ಇದರೊಂದಿಗೆ ಸಿಎಂ ಆಗುವ ಕನಸು ಕಾಣುತ್ತಿದ್ದ ಡಿ.ಕೆ.ಶಿವಕುಮಾರ್ ಅವರಿಗೆ ಸಿದ್ದರಾಮಯ್ಯ ಬಣ ಚೆಕ್‌ಮೇಟ್‌ ನೀಡಿದೆ ಎಂದು ಟಾಂಗ್ ನೀಡಿದೆ.

ಶತಾಯಗತಾಯ ಸಿಎಂ ಪಟ್ಟಕ್ಕೆ ಏರುವವರೆಗೆ ಕೆಪಿಸಿಸಿ ಕುರ್ಚಿ ಬಿಟ್ಟುಕೊಡಲಾರೆನು ಎಂದು ನಿರ್ಣಯಿಸಿದ್ದ ಡಿಕೆಶಿಗೆ ಇದೊಂದು ದೊಡ್ಡ ಹಿನ್ನಡೆಯಾಗಿದೆ. ಸಿಎಂ ಬಣದ ಸಚಿವರು ದೆಹಲಿ ಪರೇಡ್‌ ಮಾಡುತ್ತಾ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಒತ್ತಡ ತರುವಲ್ಲಿ ಯಶಸ್ವಿಯಾಗಿದ್ದಾರೆ. ಡಿಸಿಎಂ ಡಿಕೆಶಿ ಅವರೇ ನೀವು ಇಷ್ಟೊಂದು ದುರ್ಬಲರೇ? ಎಂದು ಕುಟುಕಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read