ಬೆಂಗಳೂರು: ದಸರಾ ಉದ್ಘಾಟನೆಗೆ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿರುವ ಸರ್ಕಾರದ ಕ್ರಮ ಪ್ರಶ್ನಿಸಿ ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ಹೈಕೋರ್ಟ್ ಮೆಟ್ಟಿಲೇರಿರುವ ವಿಚಾರವಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಪ್ರತಾಪ್ ಸಿಂಹ ಅವರದ್ದು ರಾಜಕೀಯ. ಬಿಜೆಪಿಯವರು ಪ್ರತಾಪ್ ಸಿಂಹ ಅವರನ್ನೇ ಕಿತ್ತು ಬಿಸಾಕಿದ್ದಾರೆ. ನಾನು ಬದುಕಿದ್ದೀನಿ ಎಂದು ತೋರಿಸಿಕೊಳ್ಳಲು ಈ ರೀತಿ ಪ್ರಯತ್ನ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿಯವರಿಗೆ ಬೇರೇನೂ ವಿಚಾರ ಇಲ್ಲ. ಮಹದಾಯಿ, ಮೇಕೆದಾಟಿಗೆ ಪರ್ಮಿಷನ್ ಕೊಡಿಸಲಿ. ಕೃಷ್ಣ ಯೋಜನೆಗೆ ಪರ್ಮಿಷನ್ ಕೊಡಿಸಲಿ. ಕೇವಲ ಪ್ರಚಾರಕ್ಕೋಸ್ಕರ ನಾಟಕ ಮಾಡುವುದಲ್ಲ ಎಂದು ಗುಡುಗಿದರು.